ಅಯೋಧ್ಯೆಯಲ್ಲಿ ಪವಾಡ: ರಾಮಮಂದಿರ ಭೂಮಿ ಪೂಜೆಯಾದ ದಿನವೇ ಗಂಗೆಯಿಂದ ಹನುಮನ ಅಭಿಷೇಕ

ಅಯೋಧ್ಯೆಯಲ್ಲಿ ಪವಾಡ: ರಾಮಮಂದಿರ ಭೂಮಿ ಪೂಜೆಯಾದ ದಿನವೇ ಗಂಗೆಯಿಂದ ಹನುಮನ ಅಭಿಷೇಕ

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮನ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿರುವ ರಾಮ ಭಕ್ತರ ಆಸೆ ಶೀಘ್ರದಲ್ಲೇ ಈಡೇರಲಿದೆ. ಡಿಸೆಂಬರ್ 2023ರಿಂದ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಬಹುದು, ಶ್ರೀ ರಾಮನ ದರ್ಶನ ಪಡೆಯಬಹುದು ಅಂತ ಇತ್ತೀಚೆಗೆ ಹೇಳಿದ್ದರು. ಈಗ ಅಯೋಧ್ಯೆಯಲ್ಲಿ ಪವಾಡವೊಂಡು ನಡೆದಿದೆ.

ಭಾರೀ ಮುಂಗಾರು ಮಳೆಯಿಂದಾಗಿ ಗಂಗಾ ನದಿಯು ಉಕ್ಕಿ ಹರಿಯುತ್ತಿದ್ದು, ಬಡೇ ಹನುಮಾನ್ ದೇವಸ್ಥಾನದ ಪ್ರದೇಶವು ನದಿಯಿಂದ ಭಾಗಶಃ ಪ್ರವಾಹಕ್ಕೆ ಒಳಗಾಗುತ್ತಿದೆ. ಈ ಬಗ್ಗೆ ಖುಷಿ ಪಟ್ಟಿರೋ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ “ರಾಮ ಮಂದಿರಕ್ಕೆ ಭೂಮಿ ಪೂಜೆಯಾಗಿದ ದಿನವೇ, ಈ ಪವಾಡ. ಇಂದೇ, ಹನುಮಂನ ವಿಗ್ರಹಕ್ಕೆ ಗಂಗಾ ಮಾತೆಯಿಂದ ಅಭಿಷೇಕವಾಗಿದೆ. ಇದು ಬಹು ನಿರೀಕ್ಷಿತ ಕ್ಷಣ ಮತ್ತು ಸಂತೋಷ ವರ್ಷದ ಸಂಕೇತ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದ್ದಾರೆ.

 

Source: newsfirstlive.com Source link