ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರವ ಯಾರಿಗೂ RTPCR ವರದಿ ಕೇಳಬೇಡಿ; ಹೀಗೆಂದು ಮತ್ತೆ ಕ್ಯಾತೆ ತೆಗೆದ ಶಿವಸೇನೆ

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರವ ಯಾರಿಗೂ RTPCR ವರದಿ ಕೇಳಬೇಡಿ; ಹೀಗೆಂದು ಮತ್ತೆ ಕ್ಯಾತೆ ತೆಗೆದ ಶಿವಸೇನೆ

ಬೆಂಗಳೂರು: ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿವಸೇನೆ ಪುಂಡಾಟ ಮುಂದುವರಿದಿದೆ. ಸದಾ ಒಂದಲ್ಲ ಮತ್ತೊಂದು ಕ್ಯಾತೆ ತೆಗೆಯುವ ಶಿವಸೇನೆ ಈಗ ಮಹಾರಾಷ್ಟ್ರದ ಹಳ್ಳಿಗಳಿಂದ ಕರ್ನಟಕಕ್ಕೆ ಬರುವ ಜನರನ್ನು ತಡೆದು RTPCR ವರದಿ ಕೇಳಬಾರದು ಎಂದು ಜಗಳ ಮಾಡುವ ಮೂಲಕ ಉದ್ಧಟತನ ತೋರಿದೆ.

ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಮೂಲಕವೇ ಮಹಾರಾಷ್ಟ್ರದ ಕೆಲವು ಹಳ್ಳಿಗಳಿಗೆ ಹಾದು ಹೋಗಬೇಕು. ಕೊರೋನಾ ಮೂರನೇ ಅಲೆ ಎದುರಾಗುತ್ತಿರುವ ಕಾರಣ ಕರ್ನಾಟಕ ಪೊಲೀಸರು ರಾಜ್ಯದೊಳಗೆ ಮಹಾರಾಷ್ಟ್ರದಿಂದ ಬರುವ ಎಲ್ಲರ ತಪಾಸಣೆ ನಡೆಸುತ್ತಿದ್ದಾರೆ. ತಡೆದು RTPCR ವರದಿ ಕೇಳುತ್ತಿದ್ದಾರೆ. ಹೀಗಿರುವಾಗ ಶಿನಸೇನೆ ಮಹಾರಾಷ್ಟ್ರ ಹಳ್ಳಿಗರಿಗೆ RTPCR ವರದಿ ಕೇಳಬೇಡಿ ಎಂದು ಕರ್ನಾಟಕ ಗಡಿಯಲ್ಲಿ ನಿಂತು ಪ್ರತಿಭಟಿಸುತ್ತಿದೆ.

ಇನ್ನು, ಶಿವಸೇನೆ ಪುಂಡಾಟಕ್ಕೆ ಕ್ಯಾರೇ ಎನ್ನದ ಕರ್ನಾಟಕ ಪೊಲೀಸರು, ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ. ನೀವು ಹೇಳಿದಂತೆ ಮಾಡಲಾಗುವುದಿಲ್ಲ. ರಾಜ್ಯ ಸರ್ಕಾರದ ಆದೇಶ ಪಾಲನೆ ಮಾಡಿಯೇ ತೀರುತ್ತೇವೆ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.

ಇದನ್ನೂ ಓದಿ: ನೆರೆಯ ರಾಜ್ಯದಲ್ಲಿ ಕೋವಿಡ್ ಹೆಚ್ಚಳ -ಕೇರಳ, ಮಹಾರಾಷ್ಟ್ರದಿಂದ ಬರೋರಿಗೆ ಹೊಸ ಮಾರ್ಗಸೂಚಿ

ಹೆಚ್ಚಿನ ಪೊಲೀಸರ ನಿಯೋಜನೆ

ಸದ್ಯ ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಜ್ಯಕ್ಕೆ ನುಗ್ಗಿ ಕರ್ನಾಟಕ ಚೆಕ್​​ ಪೋಸ್ಟ್​ ಧ್ವಂಸ ಮಾಡುವುದಾಗಿ ಗುರುವಾರ ಶಿವಸೇನೆ ಮುಖಂಡ ವಿಜಯ್​​ ದೇವನೆ ಬೆದರಿಕೆ ಹಾಕಿದ್ದ. ಇದಕ್ಕೆ ಕರ್ನಾಟಕ ಪೊಲೀಸರು ಜಗ್ಗಲಿಲ್ಲ.

Source: newsfirstlive.com Source link