ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ; ED ದಾಳಿ ಬಳಿಕ ಜಮೀರ್​​ ಹೀಗಂದಿದ್ಯಾಕೇ?

ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ; ED ದಾಳಿ ಬಳಿಕ ಜಮೀರ್​​ ಹೀಗಂದಿದ್ಯಾಕೇ?

ಬೆಂಗಳೂರು: ಐಎಂಎ ವಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಕಾರಣ ಚಾಮರಾಜಪೇಟೆ​ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ED ಅಧಿಕಾರಿಗಳು ನಡೆಸಿದ ದಾಳಿ ಈಗ ಅಂತ್ಯಗೊಂಡಿದೆ. ಗುರುವಾರ ಬೆಳಿಗ್ಗೆ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ಜಮೀರ್​​ ನಿವಾಸದ ಮೇಲೆ ದಾಳಿ ಮಾಡಿದ್ದ ED ಅಧಿಕಾರಿಗಳು 24 ಗಂಟೆಗಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು, ದಾಳಿ ಸಂಬಂಧ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಶಾಸಕ ಜಮೀರ್​, ನನ್ನ ಮನೆಯ ನಿರ್ಮಾಣದ ಸಂಬಂಧ ದಾಳಿ ನಡೆಸಿದ್ದು, ನನ್ನ ವಿರುದ್ಧ ಮೂರು ನಾಲ್ಕು ದೂರುಗಳು ಹೋಗಿದ್ದಾವಂತೆ. ಹೀಗಾಗಿ ಅಧಿಕಾರಿಗಳು ದಾಳಿ ನಡೆಸಿದ್ದು, ನಾನು ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ ಇಡಿ ಶಾಕ್​ -ಮನೆ, ಕಚೇರಿ ಮೇಲೆ ಇಡಿ ದಾಳಿ

ED ಅಧಿಕಾರಿಗಳು ಮನೆ ನಿರ್ಮಾಣಕ್ಕೆ ಮಾಡಿದ ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದು, ಆ ಮಾಹಿತಿಯನ್ನು ಕೂಡ ನೀಡಿದ್ದೇನೆ. ಈ ಮನೆ ಕಟ್ಟಲು ಏಳು ವರ್ಷ ಆಗಿದೆ. ನಾನು ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ. ಬ್ಯಾಂಕ್​​​ಗೆ ಹೋಗಿ ನನ್ನ ಹಣ ಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಕುರಿತು ನನ್ನ ಅಕೌಂಟೆಂಟ್ ಬಾಲಾಜಿ ಎಲ್ಲಾ ಮಾಹಿತಿ ನೀಡಿದ್ದಾರೆ.

ಅವರಿಗೆ ಬೇಕಾದ ಎಲ್ಲಾ ಮಾಹಿತಿ ನೀಡಿದ ಮೇಲೆ ದಾಳಿ ಅಂತ್ಯಗೊಳಿಸಿದ್ದಾರೆ. ಇದುವರೆಗೆ ಯಾವುದೇ ನೋಟಿಸ್ ನೀಡಿಲ್ಲ, ಅವಶ್ಯಕತೆ ಬಿದ್ರೆ ಪೋನ್ ಮಾಡುತ್ತೇವೆ ಅವಾಗ ಬರಬೇಕಾಗುತ್ತದೆ ಎಂದು ಓರಲ್ ಆಗಿ ಹೇಳಿದ್ದಾರೆ. ಅವರು ಕರೆದ್ರೆ ನಾನು ಯಾವಾಗ ಬೇಕಾದ್ರು ಹೋಗುತ್ತೇನೆ. ನನ್ನ ರಾಜಕೀಯ ವಿರೋಧಿಗಳು ಹೀಗೆ ದೂರು ‌ನೀಡಿರಬಹುದು. ಆದರೆ ಅವರು ನೀಡಿದ ದೂರಿನ ನಂತ್ರ ಇವಾಗ ಎಲ್ಲಾ ಕ್ಲಿಯರ್ ಆಗಿದೆ. ಈ ದಾಳಿಯಿಂದ ನನಗೂ ಸಮಾಧಾನ ಆಗಿದೆ ಎಂದರು.

 

Source: newsfirstlive.com Source link