ರೋಷನ್ ಬೇಗ್ ನಿವಾಸದಲ್ಲಿ ಮುಂದುವರಿದ ಇಡಿ ದಾಳಿ

ಬೆಂಗಳೂರು: ಕಾಂಗ್ರೆಸ್ಸಿನ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಅಧಿಕಾರಿಗಳ ಶೋಧ ಕಾರ್ಯದ ಬಳಿಕ ರೋಷನ್ ಬೇಗ್ ರನ್ನ ತೀವ್ರ ವಿಚಾರಣೆ ಮಾಡುತ್ತಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಬೇಗ್ ಫುಲ್ ಸುಸ್ತಾಗಿದ್ದಾರೆ.

ಸತತ 25 ಗಂಟೆಗಳಿಂದ ವಿಚಾರಣೆ ನಡೆಯುತ್ತಿದ್ದು, ಐಎಂಎ ವಂಚನೆ ಪ್ರಕರಣದಲ್ಲಿ ಬೇಗ್ ಭಾಗಿಯಾಗಿರುವ ಬಗ್ಗೆ ವಿಚಾರಣೆ ನಡೆಯುತ್ತಿದೆ ಎನ್ನಲಾಗ್ತಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಪಾತ್ರ ಸಾಬೀತಾಗಿತ್ತು. ಬೇಗ್ ಗೆ ಸೇರಿದ 16.81 ಕೋಟಿ ರೂ.ಮೌಲ್ಯದ ಆಸ್ತಿಯನ್ನ ನ್ಯಾಯಾಲಯ ನಿರ್ದೇಶನದ ಮೇರೆಗೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಜಪ್ತಿ ಮಾಡಿದ್ರು. ಇದನ್ನೂ ಓದಿ: ನನ್ನ ಆಸ್ತಿಯೆಲ್ಲ ಬಡವರ ಬಳಿಯೇ ಇದೆ: ಜಮೀರ್

ವಶಕ್ಕೆ ಪಡೆದುಕೊಂಡಿದ್ದ ಆಸ್ತಿ ಮೌಲ್ಯದ ವರದಿಯನ್ನ ಇಡಿ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರವು ಕಳಿಸಿಕೊಟ್ಟಿತ್ತು. ಈ ವರದಿ ಆಧರಿಸಿ ಇಡಿ ರೇಡ್ ನಡೆದಿದೆ ಎನ್ನಲಾಗ್ತಿದೆ. ಮನ್ಸೂರ್ ಅಲಿಖಾನ್ ನಿಂದ 400 ಕೋಟಿಗಿಂತ ಹೆಚ್ಚು ಹಣವನ್ನ ಬೇಗ್ ಅಕ್ರಮವಾಗಿ ಪಡೆದಿದ್ರು. ಅಕ್ರಮ ಹಣ ಕೊಟ್ಟಿರೋದರ ಬಗ್ಗೆ ಸ್ವತಃ ಮನ್ಸೂರ್ ಅಲಿಖಾನ್ ಬಾಯ್ಬಿಟ್ಟಿದ್ದ.

Source: publictv.in Source link