ಭಾರತ ಮಹಿಳಾ ಹಾಕಿ ತಂಡದ ಕಸನು ಭಗ್ನ- ಕೈತಪ್ಪಿದ ಕಂಚಿನ ಪದಕ

ಭಾರತ ಮಹಿಳಾ ಹಾಕಿ ತಂಡದ ಕಸನು ಭಗ್ನ- ಕೈತಪ್ಪಿದ ಕಂಚಿನ ಪದಕ

ಭಾರತ ಮಹಿಳಾ ಹಾಕಿ ತಂಡದ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಇಂದು ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಭಾರತ, ಗ್ರೇಟ್ ಬ್ರಿಟನ್ ವಿರುದ್ಧ 4-3 ಅಂತರದ ಗೋಲುಗಳಿಂದ ವೀರೋಚಿತ ಸೋಲು ಅನುಭವಿಸಿತು. ಆ ಮೂಲಕ ರಾಣಿ ರಾಮ್​ಪಾಲ್​​ ನೇತೃತ್ವದ ಭಾರತ ಹಾಕಿ ತಂಡ, ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಡುವುದರೊಂದಿಗೆ ಕಂಚಿನ ಪದಕ ಕೈತಪ್ಪುವಂತಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ, ಗ್ರೇಟ್ ಬ್ರಿಟನ್​ಗೆ ರಾಣಿ ರಾಮ್​ಪಾಲ್ ಪಡೆ ತೀವ್ರ ಪೈಪೋಟಿ ನೀಡಿತ್ತು.

ಮೊದಲಾರ್ಧದ ಅಂತ್ಯಕ್ಕೆ 3-2 ಗೋಲುಗಳ ಅಂತರದ ಭಾರತ ಮೇಲುಗೈ ಸಾಧಿಸಿತ್ತು. ಆದ್ರೆ ದ್ವೀತಿಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿದ ಎದುರಾಳಿ ಗ್ರೇಟ್​ ಬ್ರಿಟನ್, ಬ್ಯಾಕ್ ಟು ಬ್ಯಾಕ್ 2 ಗೋಲು ಬಾರಿಸಿ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಕೇವಲ ಒಂದು ಗೋಲು ಬಾರಿಸಲಷ್ಟೇ ಶಕ್ತವಾದ ಭಾರತ, ಕೊನೆಗೆ 4-3 ಗೋಲುಗಳ ಅಂತರದಿಂದ ಪರಭಾವಗೊಂಡಿತು. ಇದರೊಂದಿಗೆ ಕಂಚಿನ ಪದಕ ಗೆಲ್ಲುವ ಕನಸು ಭಗ್ನಗೊಂಡಿತು.

Source: newsfirstlive.com Source link