ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ವನಿತೆಯರಿಗೆ ಕೈ ತಪ್ಪಿದ ಕಂಚು

ಟೋಕಿಯೋ: ಭಾರತದ ಮಹಿಳಾ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬ್ರಿಟನ್ ವಿರುದ್ಧ ಅಪ್ರತಿಮ ಹೋರಾಟ ನಡೆಸಿ 4-3 ಅಂತರದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಭಾರತಕ್ಕೆ ಕಂಚಿನ ಪದಕ ಕೈತಪ್ಪಿದೆ.

ಮೊದಲನೇ ಕ್ವಾರ್ಟರ್​ನಲ್ಲಿ ಯಾವುದೇ ಗೋಲ್ ಗಳಿಸದೆ ಭಾರತ ಹಾಗೂ ಬ್ರಿಟನ್ ಎರಡು ತಂಡಗಳು ರಕ್ಷಣಾ ಆಟಕ್ಕೆ ಮೊರೆ ಹೋದರೆ. ಎರಡನೇ ಕ್ವಾರ್ಟರ್​ನಲ್ಲಿ ಮೊದಲು ಬ್ರಿಟನ್ ತಂಡ 2-0 ಮುನ್ನಡೆ ಪಡೆದುಕೊಂಡಿತ್ತು. ಬಳಿಕ ಪುಟಿದೆದ್ದ ಭಾರತ ತಂಡ ಗುರ್ಜಿತ್ ಕೌರ್ 25ನೇ ಮತ್ತು 26ನೇ ನಿಮಿಷದಲ್ಲಿ ಸಿಡಿಸಿದ ಸತತ ಎರಡು ಗೋಲ್‍ನ ನರೆವಿನಿಂದ 2-2 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಂತರ 29ನೇ ನಿಮಿಷದಲ್ಲಿ ವಂದನಾ ಕಟಾರಿತಯಾ ಸಿಡಿಸಿದ ಗೋಲ್ ಮೂಲಕ ಭಾರತ 3-2 ಗೋಲುಗಳ ಮುನ್ನಡೆ ಪಡೆಯಿತು.

ಮೂರನೇ ಕ್ವಾರ್ಟರ್​ನಲ್ಲಿ ಬ್ರಿಟನ್ ಮತ್ತೆ ಗೋಲ್ ಬಾರಿಸಿ 3-3 ಸಮಬಲದ ಹೋರಾಟ ನಡೆಸಿತು. ನಾಲ್ಕನೇ ಕ್ವಾರ್ಟರ್ ಅಂತ್ಯದಲ್ಲಿ ಬ್ರಿಟನ್ 4-3 ಗೋಲುಗಳ ಮುನ್ನಡೆಯೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿತು.

Source: publictv.in Source link