ಅಭಿನಂದಿಸಲು ಹಾರ ತುರಾಯಿ ತರಬೇಡಿ, ಪುಸ್ತಕ ತನ್ನಿ: ಸುನೀಲ್ ಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದ ನೂತನ ಸಚಿವರಾಗಿ ಈ ಬಾರಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿನಂದಿಸಲು ಬರುವವರ ಬಳಿ ಸಚಿವರು ಮನವಿ ಮಾಡಿಕೊಂಡಿದ್ದಾರೆ.

ಹೌದು. ಈ ಸಂಬಂಧ ತಮ್ಮ ಫೋಟೋ ಇರುವ ಪೋಸ್ಟ್ ಹಾಕಿಕೊಂಡಿರುವ ಸುನೀಲ್ ಕುಮಾರ್, ಅಭಿನಂದಿಸಲು ಹಾರ ತುರಾಯಿ ತರಬೇಡಿ. ತರಲೇಬೇಕು ಎಂದಿದ್ದರೆ ಒಂದು ಪುಸ್ತಕ ತೆಗೆದುಕೊಂಡು ಬನ್ನಿ. ಅದನ್ನು ನಾನು ಕಾರ್ಕಳದಲ್ಲಿರುವ ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

ಸುನೀಲ್ ಕುಮಾರ್ ಅವರು 2004, 2013 ಹಾಗೂ 2018ರಲ್ಲಿ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಗೋಪಾಲ ಭಂಡಾರಿ ವಿರುದ್ಧ ಗೆಲುವು ಸಾಧಿಸಿದ್ದರು. ಬಳಿಕ ಸರ್ಕಾರದ ಮುಖ್ಯ ಸಚೇತರಕರಾಗಿ, ಕೇರಳ ಬಿಜೆಪಿ ಸಹ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ಮೊದಲ ಬಾರಿ ಸಚಿವರಾಗಿದ್ದಾರೆ.

Source: publictv.in Source link