ಸಂಪುಟ ರಚನೆ; ಬೊಮ್ಮಾಯಿ ವಿರುದ್ಧ ಸಿ.ಎಸ್​ ಅಶ್ವಥ್ ನಾರಾಯಣ್ ಅಸಮಾಧಾನ ಹೊರಹಾಕಿದ್ಯಾಕೆ?

ಸಂಪುಟ ರಚನೆ; ಬೊಮ್ಮಾಯಿ ವಿರುದ್ಧ ಸಿ.ಎಸ್​ ಅಶ್ವಥ್ ನಾರಾಯಣ್ ಅಸಮಾಧಾನ ಹೊರಹಾಕಿದ್ಯಾಕೆ?

ಬೆಂಗಳೂರು: ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಬೆನ್ನಲ್ಲೇ ರಾಜ್ಯ ಬಿಜೆಪಿಯೊಳಗೆ ಅಸಮಾಧಾನದ ಹೊಗೆಯಾಡುತ್ತಿದೆ. ಬೆಂಗಳೂರು ಸಚಿವರನ್ನು ಕೇಳದೆಯೇ ಮಾರಕ ಕೊರೋನಾ ಮತ್ತು ನೆರೆ ನಿಯಂತ್ರಣಕ್ಕೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ನಮ್ಮ ಗಮನಕ್ಕೂ ತರದೆ ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯಾಗಿ ಆರ್. ಅಶೋಕ್ ನೇಮಕ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಸಿ.ಎಸ್​ ಅಶ್ವಥ್ ನಾರಾಯಣ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ 7 ಮಂದಿ ಬೆಂಗಳೂರು ನಾಯಕರಿದ್ದೆವು. ಸಂಪುಟ ವಿಸ್ತರಣೆಯಾದಾಗ ಬೆಂಗಳೂರಿಗೆ ಮತ್ತೊಂದು ಸ್ಥಾನ ಸಿಕ್ಕಿತ್ತು. ಅದಾದ ಬಳಿಕವೂ ಯಾರಿಗೂ ಬೆಂಗಳೂರು ನಗರದ ಉಸ್ತುವಾರಿ ನೀಡಿರಲಿಲ್ಲ. ಯಡಿಯೂರಪ್ಪರ ಬಳಿಯೇ ಉಸ್ತುವಾರಿ ಸ್ಥಾನ ಇಟ್ಟುಕೊಂಡಿದ್ರು. ಆದರೀಗ, ಬೊಮ್ಮಾಯಿ ಸಿಎಂ ಆದ ಕೂಡಲೇ ಆರ್​​. ಅಶೋಕ್​​ಗೆ ಬೆಂಗಳೂರಿ ಉಸ್ತುವಾರಿ ನೀಡಿದ್ದಾರೆ ಎಂದು ಆರ್​ಎಸ್​ಎಸ್​ ಕಚೇರಿಗೆ ಭೇಟಿ ನೀಡಿ ಸಿ.ಎಸ್​ ಅಶ್ವಥ್ ನಾರಾಯಣ್ ಸಿಎಂ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ನ್ಯೂಸ್​​ಫಸ್ಟ್​ಗೆ ಉನ್ನತ ಮೂಲಗಳು ತಿಳಿಸಿವೆ.

ಸಂಪುಟ ರಚನೆಯಾದದ್ದೇ ತಡ ಏಕಾಏಕಿ ಕೊರೋನಾ, ಮಳೆ ಹಾನಿಗೆ ಉಸ್ತುವಾರಿ ನೇಮಿಸಲಾಗಿದೆ. ಬೆಂಗಳೂರಿನ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸದೇ ನೇಮಿಸಲಾಗಿದೆ. ಈ ಕುರಿತು ಏನಾದರು ಮಾಡಿ ಎಂದು ಆರ್​ಎಸ್​ಎಸ್​ ನಾಯರಿಗೆ ಸಚಿವ ಸಿ.ಎಸ್​ ಅಶ್ವಥ್ ನಾರಾಯಣ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ; ED ದಾಳಿ ಬಳಿಕ ಜಮೀರ್​​ ಹೀಗಂದಿದ್ಯಾಕೇ?

ಇನ್ನು, ಸಿಎಂ ಬಸವರಾಜ್​​ ಬೊಮ್ಮಾಯಿ ಜತೆ ಈ ಕುರಿತು ಮಾತುಕತೆ ನಡೆಸಿದ ಸಿ.ಎಸ್​ ಅಶ್ವಥ್ ನಾರಾಯಣ್ ತನ್ನ ಅಸಮಾಧಾನ ಹೊರಹಾಕಿದ್ದಾರೆ. ಇದಾದ ನಂತರ ಆರ್​ಎಸ್​ಎಸ್​ ನಾಯಕರಿಗೆ ಇದರ ಕುರಿತು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Source: newsfirstlive.com Source link