24 ಗಂಟೆ ED ಫುಲ್​​ ಡ್ರಿಲ್​​​; ವಿಚಾರಣೆ ಅಂತ್ಯದ ಬೆನ್ನಲ್ಲೀಗ ರಿಲ್ಯಾಕ್ಸ್​ ಮೂಡ್​​ನಲ್ಲಿ ಜಮೀರ್​

24 ಗಂಟೆ ED ಫುಲ್​​ ಡ್ರಿಲ್​​​; ವಿಚಾರಣೆ ಅಂತ್ಯದ ಬೆನ್ನಲ್ಲೀಗ ರಿಲ್ಯಾಕ್ಸ್​ ಮೂಡ್​​ನಲ್ಲಿ ಜಮೀರ್​

ಬೆಂಗಳೂರು: ಸತತ 24 ಗಂಟೆಗಳ ED ಶೋಧ ಕಾರ್ಯ ಅಂತ್ಯವಾದ ಹಿನ್ನೆಲೆ ಶಾಸಕ ಜಮೀರ್​ ಅಹ್ಮದ್​ ಸದ್ಯ ವಿಶ್ರಾಂತಿಗೆ ತೆರಳಿದ್ದಾರೆ. ಇನ್ನು ಬಂಬೂ ಬಜಾರ್​ನ ಮನೆ ಮುಂದೆ ಜಮೀರ್ ಭೇಟಿಗಾಗಿ ಅಭಿಮಾನಿಗಳು ಕಾದು ಕುಳಿತಿದ್ದು, 11 ಗಂಟೆಯ ನಂತರ ಜಮೀರ್ ಅಭಿಮಾನಿಗಳನ್ನ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

blank

ED ದಾಳಿಯ ನಂತರ ಮಾಧ್ಯಮಕ್ಕೆ ಸ್ಪಷ್ಟನೆ ಕೊಟ್ಟು ವಿಶ್ರಾಂತಿಗೆ ತೆರಳಿದ್ದ ಜಮೀರ್​ಗೆ ಮೂರ್ನಾಲ್ಕು ದಿನದಲ್ಲೇ EDಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಗಳಿವೆ ಎನ್ನಲಾಗ್ತಿದ್ದು, ED ಕೊಂಡೊಯ್ದ ದಾಖಲೆಗಳ ಪರಿಶೀಲನೆ ಮಾಡಿ ಮತ್ತೆ ಜಮೀರ್​ರನ್ನ ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಎಸ್​ಬಿಐ ಹಾಗೂ ಜನತಾ ಕೋ-ಆಪರೇಟಿವ್ ಬ್ಯಾಂಕ್​ನ ವಹಿವಾಟಿನ ಕಳೆದ ಹದಿನೈದು ವರ್ಷದ ಸ್ಟೇಟ್​ಮೆಂಟ್​ ಪಡೆದಿರುವ ED ಜಮೀರ್​ ಮನೆ, ಜಾಗ ಸೇರಿದಂತೆ ಹಲವಾರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ; ED ದಾಳಿ ಬಳಿಕ ಜಮೀರ್​​ ಹೀಗಂದಿದ್ಯಾಕೇ?

ಅದೇ ರೀತಿ ಬಂಬೂ ಬಜಾರ್​ನ ಒಂದುವರೆ ಎಕರೆ ಜಾಗದ ಸ್ಟ್ಯಾಂಡರ್ಡ್​ ರೇಟನ್ನ ಪಡೆದಿರೋ ED ಅಧಿಕಾರಿಗಳು. 2006 ರಲ್ಲಿ ಇದ್ದ ಜಾಗದ ಸ್ಟ್ಯಾಂಡರ್ಡ್ ರೇಟನ್ನ ಲೆಕ್ಕಾಚಾರ ಮಾಡಿ ಜಮೀರ್​ರ ಆದಾಯದ ಮೂಲದ ಬಗೆಗೂ ಮಾಹಿತಿ ಪಡೆದಿದ್ದು, 110 ಕೋಟಿಯ ಬಿಲ್ಡಿಂಗ್, ಜಮೀನಿಗೆ ಮಾಡಲಾದ ವೆಚ್ಚದ ಹಿಂದಿರುವ ಆದಾಯ ಮೂಲದ ಬಗೆಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

Source: newsfirstlive.com Source link