ರಾಜ್ ಕುಂದ್ರಾ ಪ್ರಕರಣ; ಶೆರ್ಲಿನ್ ಚೋಪ್ರಾಗೆ ಮತ್ತೆ ಸಮನ್ಸ್​

ರಾಜ್ ಕುಂದ್ರಾ ಪ್ರಕರಣ; ಶೆರ್ಲಿನ್ ಚೋಪ್ರಾಗೆ ಮತ್ತೆ ಸಮನ್ಸ್​

ಮಹಾರಾಷ್ಟ್ರ: ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಆಘಾತಕಾರಿ ಆರೋಪ ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಇಂದು ವಿಚಾರಣೆಗೆ ಬರುವಂತೆ ಹೇಳಿದೆ.

ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಲೈ 19 ರಂದು ಬಂಧಿಸಲಾಗಿತ್ತು. ಈ ಕುರಿತು ನಟಿ ಶೆರ್ಲಿನ್ ಚೋಪ್ರಾ ಅವರಿಗೆ ಸಮನ್ಸ್ ನೀಡಿದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ನಟಿಗೆ ವಿಚಾರಣೆಗೆ ಹಾಜರಾಗುವಂತೆ ಕೋರಿದ್ದಾರೆ.

ಇದನ್ನೂ ಓದಿ: 121 ವಿಡಿಯೋಗಳನ್ನ 12 ಲಕ್ಷಕ್ಕೆ ಡೀಲ್ ಮಾಡಲು ಮುಂದಾಗಿದ್ರಂತೆ ರಾಜ್​ ಕುಂದ್ರಾ

ಇತ್ತೀಚೆಗೆ ನಟಿ ಶೆರ್ಲಿನ್ ಚೋಪ್ರಾ ವಿಡಿಯೋವೊಂದನ್ನು ಬಿಡುಗಡೆ ಮಾಡಿ ರಾಜ್​ ಕುಂದ್ರಾ ಪ್ರಕರಣದಲ್ಲಿ ನಾನೇ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದೆ ಎಂದಿದ್ದರು. ಅಷ್ಟೇ ಅಲ್ಲದೆ 2019 ರಲ್ಲಿ ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು.

ಈಗ ರಾಜ್ ಕುಂದ್ರಾ ಇನ್ನೂ ಕಸ್ಟಡಿನಲ್ಲಿರುವ ಕಾರಣ ಈ ನಟಿಯನ್ನು ವಿಚಾರಣೆಗೆ ಕರೆಯಲಾಗಿದೆ. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಜೊತೆ ಹಲವಾರು ವರ್ಷಗಳಿಂದ ಸಂಪರ್ಕ ಹೊಂದಿದ್ದೆ ಎಂದು ನಟಿ ಹೇಳಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ರಾಜ್​ ಕುಂದ್ರಾ ಸದ್ಯ ಕಸ್ಟಡಿಯಲ್ಲಿದ್ದು, ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಆಗಸ್ಟ್ 10ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ರಾಜ್​ ಕುಂದ್ರಾ ಬಂಧನ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಶಿಲ್ಪಾಶೆಟ್ಟಿ ಹೇಳಿದ್ದೇನು..?

Source: newsfirstlive.com Source link