ತಪ್ಪಿದ ಸಚಿವ ಸ್ಥಾನ; ಶಾಸಕಿ ಪೂರ್ಣಿಮಾ ಅಭಿಮಾನಿಗಳಿಂದ ಪಾದಯಾತ್ರೆ

ತಪ್ಪಿದ ಸಚಿವ ಸ್ಥಾನ; ಶಾಸಕಿ ಪೂರ್ಣಿಮಾ ಅಭಿಮಾನಿಗಳಿಂದ ಪಾದಯಾತ್ರೆ

ಚಿತ್ರದುರ್ಗ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದು ಪಾದಯಾತ್ರೆ ನಡೆಸಿ ಅಸಾಮಾಧನ ಹೊರ ಹಾಕಿದ್ದಾರೆ.

blank

ಶಾಸಕಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ ಅಭಿಮಾನಿಗಳು, ಧರ್ಮಪುರದಿಂದ-ಹಿರಿಯೂರು ನಗರಕ್ಕೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದು, ಸಾಮಾಜಿಕ ನ್ಯಾಯ, ಮಹಿಳಾ ಕೋಟಾದಡಿ ಮಂತ್ರಿಗಿರಿ ನೀಡುವಂತೆ ಆಗ್ರಹ ಪಡಿಸಿದ ಅಭಿಮಾನಿಗಳು, ಮಂತ್ರಿ ಸ್ಥಾನ ನೀಡುವುದಾಗಿ ಆಸೆ ತೋರಿಸಿ ಬೊಮ್ಮಾಯಿ ಸರ್ಕಾರ ಮೋಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಪಾದಯಾತ್ರೆಯಲ್ಲಿ ಶಾಸಕಿಯ ಅಭಿಮಾನಿಗಳು, ಸೇರಿದಂತೆ ಸಾಕಷ್ಟು ಬೆಂಬಲಿಗರು, ಗೊಲ್ಲ ಸಮುದಾಯದ ಮುಖಂಡರು, ಗ್ರಾಪಂ, ತಾಪಂ, ಜಿಪಂ ಸದಸ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಯಾದವ ಸಮಾಜದ ಒತ್ತಾಯ!

Source: newsfirstlive.com Source link