ಬಿಕಿನಿ ತೊಟ್ಟು ಫೋಟೋಗೆ ಹಾಟ್ ಫೋಸ್ – ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ

ಮುಂಬೈ: ಬಾಲಿವುಡ್ ನಟಿ ದಿಶಾ ಪಟಾಣಿ ತಮ್ಮ ಬ್ಯುಸಿ ಶೆಡ್ಯೂಲ್‍ಗಳ ಮಧ್ಯೆ ಆಗಾಗ ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಸದ್ಯ ಬಿಕಿನಿಯೊಂದನ್ನು ತೊಟ್ಟು ಸಮುದ್ರದಲ್ಲಿ ಹಾಟ್ ಆಗಿ ದಿಶಾ ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶೀಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸುವಂತಿದೆ.

ಈ ಫೋಟೋವನ್ನು ದಿಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ದಿಶಾ ಪಟಾಣಿ ಕಡಲತೀರದಲ್ಲಿ ಪಿಂಕ್ ಕಲರ್ ಬಿಕಿನಿ ಜೊತೆಗೆ ಟೋಪಿಯೊಂದನ್ನು ತೊಟ್ಟು ಏಕಾಂತದಲ್ಲಿ ಕುಳಿತು ಸೂರ್ಯನ ಕಿರಣ, ಮರಳು ಮತ್ತು ಸಮುದ್ರ ತೀರದ ವಾತವಾರಣದಲ್ಲಿ ಸಖತ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಹೂವಿನ ಎಮೋಜಿಯನ್ನು ಕ್ಯಾಪ್ಷನ್‍ನಲ್ಲಿ ಹಾಕಿರುವುದನ್ನು ಕಾಣಬಹುದಾಗಿದೆ. ಈ ಫೋಟೋಗೆ ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ.

ಈ ಮುನ್ನ ಬಿಳಿ ಬಣ್ಣದ ಬಿಕಿನಿ ತೊಟ್ಟು ದಿಶಾ ಫೋಟೋಗೆ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದರು. ಈ ಫೋಟೋವನ್ನು ಕೂಡ ಇನ್‍ಸ್ಟಾಗ್ರಾಮ್‍ನಲ್ಲಿ ದಿಶಾ ಹಂಚಿಕೊಂಡಿದ್ದು, ಸಮುದ್ರದಲ್ಲಿ ನಿಂತು ಬಿಸಿಲಿನ ಶಾಖ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಸಿಗರೇಟ್ ಸೇದುತ್ತಾ ಪೋಸ್ ಕೊಟ್ಟ ಮುದ್ದು ಹುಡುಗಿ ಆಶಿಕಾ!

Source: publictv.in Source link