IT, EDಗೆ ಡಿಕೆಎಸ್​ ತುಂಬಾ ಕ್ಲೋಸ್​, ಜಮೀರ್ ಮನೆ ಮೇಲೆ ಅವ್ರೇ ದಾಳಿ ಮಾಡಿಸಿರಬಹುದು- ಎಸ್​.ಟಿ.ಸೋಮಶೇಖರ್

IT, EDಗೆ ಡಿಕೆಎಸ್​ ತುಂಬಾ ಕ್ಲೋಸ್​, ಜಮೀರ್ ಮನೆ ಮೇಲೆ ಅವ್ರೇ ದಾಳಿ ಮಾಡಿಸಿರಬಹುದು- ಎಸ್​.ಟಿ.ಸೋಮಶೇಖರ್

ಮೈಸೂರು: ಕಾಂಗ್ರೆಸ್​ ನಾಯಕ ಜಮೀರ್ ಅಹಮ್ಮದ್ ಖಾನ್ ಪದೇ ಪದೆ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದರು. ಇದು ಡಿ.ಕೆ.ಶಿವಕುಮಾರ್‌ಗೆ ಅಜೀರ್ಣವಾಗಿರಬೇಕು ಅಂತಾ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಜಮೀರ್ ಅಹಮ್ಮದ್​ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿರುವ ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಎಸ್​ಟಿ ಸೋಮಶೇಖರ್​, ಡಿಕೆ ಶಿವಕುಮಾರ್‌ಗೆ ಇಡಿ (ಜಾರಿ ನಿರ್ದೇಶನಾಲಯ), ಐಟಿ (ಆದಾಯ ಮತ್ತು ತೆರಿಗೆ ಇಲಾಖೆ)ಯ ಲಿಂಕ್ ಜಾಸ್ತಿ ಬೆಳೆದಿದೆ. ಹೀಗಾಗಿ ಅವರೇ ಯಾಕೆ ಜಮೀರ್ ಮನೆ ಮೇಲೆ ದಾಳಿ ಮಾಡಿಸಿರಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.

blank

ಬಿಜೆಪಿ ಇಂತಹ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ನವರು ಹೇಳಿದ್ರೆ, ನಾವು ಡಿಕೆ ಶಿವಕುಮಾರ್ ಮೇಲೆಯೇ ಹೀಗೆ ಬೆರಳು ಮಾಡಬಹುದಲ್ವಾ? ಐಟಿ ಮತ್ತು ಇಡಿ ಅವರ ಕೆಲಸ ಅವರು ಮಾಡುತ್ತಾರೆ. ವ್ಯವಹಾರಗಳು ಸರಿಯಿದ್ದಾಗ ಯಾರೂ ಅದಕ್ಕೆ ಹೆದರುವ ಅಗತ್ಯ ಇಲ್ಲ. ಐಟಿ ಇಡಿ ಕೇಳುವ ದಾಖಲೆ ಕೊಟ್ಟರೆ ಮುಗಿತು. ಇದನ್ನ ನೋಡಿದರೆ ಏನೋ ವ್ಯವಹಾರ ಸರಿಯಿಲ್ಲ ಎನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

blank

Source: newsfirstlive.com Source link