2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಏಕಾಂಗಿಯಾಗಿದ್ದ ಕೊಹ್ಲಿ ವೈಫಲ್ಯ ಮೆಟ್ಟಿ ನಿಂತಿದ್ದೇಗೆ?

2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಏಕಾಂಗಿಯಾಗಿದ್ದ ಕೊಹ್ಲಿ ವೈಫಲ್ಯ ಮೆಟ್ಟಿ ನಿಂತಿದ್ದೇಗೆ?

ಸದ್ಯ ನಡೀತಿರೋ ಇಂಡೋ-ಇಂಗ್ಲೆಂಡ್​ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ, ಟೀಮ್​ ಇಂಡಿಯಾದ ಟ್ರಂಪ್​ ಕಾರ್ಡ್​​. ಆದ್ರೆ, ಇದೇ ಕೊಹ್ಲಿ 2014ರ ಪ್ರವಾಸದ ವೇಳೆ ಏಕಾಂಗಿಯಾಗಿದ್ರು. ವೈಫಲ್ಯದ ಸುಳಿಗೆ ಸಿಲುಕಿದ್ದ ಕೊಹ್ಲಿ ಬೆಂಬಲಕ್ಕೆ ಯಾರು ಬಂದಿರಲಿಲ್ಲವಂತೆ. ವೈಫಲ್ಯವನ್ನ ಕೊಹ್ಲಿ ಓವರ್​ ಕಮ್​ ಮಾಡಿದ್ದೇಗೆ..?blank

ವಿಶ್ವ ಕ್ರಿಕೆಟ್​ನ ಅಗ್ರ ಬ್ಯಾಟ್ಸ್​ಮನ್​ ಆಗಿರುವ ಟೀಮ್​ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ, ಹಲವು ಯುವ ಪ್ರತಿಭೆಗಳ ಪಾಲಿಗೆ ಗುರುವಾಗಿಯೂ ಗುರುತಿಸಿಕೊಂಡಿದ್ದಾರೆ. ಯುವ ಆಟಗಾರರು ತಪ್ಪು ಮಾಡಿದಾಗ, ಅವರ ಬೆಂಬಲಕ್ಕೆ ನಿಲ್ಲೋದಲ್ಲದೆ, ಸರಿಪಡಿಸಿಕೊಳ್ಳೋಕೆ ಏನು ಮಾಡಬೇಕು ಎಂದು ಸಲಹೆ ನೀಡಿದ ಅದೆಷ್ಟೋ ಉದಾಹರಣೆಗಳಿವೆ. ಆದ್ರೆ, ಸ್ವತಃ ಕೊಹ್ಲಿಯೇ ಎಡವಿದಾಗ ಸಹಾಯಕ್ಕೆ ಯಾರೊಬ್ಬರೂ ಬಂದಿರಲಿಲ್ಲವಂತೆ

blank

ಹೌದು.. 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಆಡಿದ 10 ಇನ್ನಿಂಗ್ಸ್​​ಗಳಲ್ಲಿ ಕೊಹ್ಲಿ, ಕೇವಲ 134 ರನ್​ ಕಲೆ ಹಾಕಿದ್ರು. ಇದು ವಿರಾಟ್​​ ಕೊಹ್ಲಿಯ ಬ್ಯಾಟಿಂಗ್​ ಸಾಮರ್ಥ್ಯದ ಮೇಲೆ ಟೀಕೆಗಳ ಸುರಿಮಳೆಗೆ ಕಾರಣವಾಗಿತ್ತು. ವೈಫಲ್ಯದಿಂದ ಕುಸಿದಿದ್ದ ವಿರಾಟ್​ ಕೊಹ್ಲಿ ರನ್​ಮಷಿನ್ ಆಗಿ ಬದಲಾಗಿದ್ದು, ಹೇಗೆ ಅನ್ನೋದನ್ನ ಸ್ವತಃ ಕೊಹ್ಲಿ ನಂತರದ ಪಂದ್ಯಗಳಲ್ಲಿ ತೋರಿಸಿದರು.

blank

ಇಂಗ್ಲೆಂಡ್​ ಪ್ರವಾಸದ ಬಳಿಕ ವಾಪಾಸ್ಸಾದ ಕೊಹ್ಲಿ, ತನ್ನ ತಪ್ಪುಗಳನ್ನ ತಿದ್ದಿಕೊಂಡ್ರು. ತನ್ನ ಮಿಸ್ಟೇಕ್​​ಗಳ ಮೇಲೆ ವರ್ಕೌಟ್​ ಮಾಡಿದ ವಿರಾಟ್​, ನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೋಡಿ ಮಾಡಿದ್ರು. ಕಾಂಗರೂ ನಾಡಲ್ಲಿ ಆಡಿದ ನಾಲ್ಕೂ ಟೆಸ್ಟ್​​ ಪಂದ್ಯಗಳಲ್ಲಿ ಶತಕ ಸಿಡಿಸಿದ ಕೊಹ್ಲಿ, ಸಿರೀಸ್​​ನಲ್ಲಿ 692ರನ್​ ಸಿಡಿಸಿ ಮಿಂಚಿದ್ರು. ಇನ್​ಫ್ಯಾಕ್ಟ್​​​​ ಆ ಬಳಿಕ ಕೊಹ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಈಗ ವಿಶ್ವ ಕ್ರಿಕೆಟ್​​ ಲೋಕವನ್ನೇ ಆಳ್ತಿದ್ದಾರೆ.

Source: newsfirstlive.com Source link