ಸೆಮಿಫೈನಲ್‍ಗೆ ಲಗ್ಗೆ ಇಟ್ಟ ಭಜರಂಗ್ ಪೊನಿಯಾ – ಪದಕ ನಿರೀಕ್ಷೆ

ಟೋಕಿಯೋ: ಒಲಿಂಪಿಕ್ಸ್ ಕುಸ್ತಿಯ 65 ಕೆ.ಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪುನಿಯ ಸೆಮಿ ಫೈನಲ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಈ ಮೊದಲು ನಡೆದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಇರಾನಿನ ಕುಸ್ತಿಪಟು ಮೋರ್ತೆಜಾ ಗಿಯಾಸಿ ವಿರುದ್ಧ 2-1 ಅಂಕಗಳ ಮುನ್ನಡೆ ಪಡೆದು ಸೆಮಿಫೈನಲ್‍ಗೆ ಲಗ್ಗೆ ಇಟ್ಟರು. ಈ ಮೂಲಕ ಭಾರತಕ್ಕೆ ಇನ್ನೊಂದು ಪದಕದ ನಿರೀಕ್ಷೆ ಮೂಡಿಸಿದ್ದಾರೆ.

ಮೊದಲ ಪ್ರೀ-ಕ್ವಾರ್ಟರ್ ಫೈನಲ್‍ನಲ್ಲಿ ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ವಿರುದ್ಧ ಮೇಲುಗೈ ಸಾಧಿಸಿದ್ದರು. ಸೆಮಿಫೈನಲ್ ಪಂದ್ಯವು ಅಪರಾಹ್ನ 2.52ಕ್ಕೆ ಆರಂಭವಾಗಲಿದೆ. ಮಹಿಳಾ ಕುಸ್ತಿಯಲ್ಲಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೀಮಾ ಬಿಸ್ಲಾ ಸೋಲು ಕಂಡು ಹೊರಬಿದ್ದಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ವನಿತೆಯರಿಗೆ ಕೈ ತಪ್ಪಿದ ಕಂಚು

blank

ನಿನ್ನೆ ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 23 ವರ್ಷದ ರವಿ ದಹಿಯಾ ಬೆಳ್ಳಿಯನ್ನು ಗೆದ್ದಿದ್ದರುಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಎರ ಬೆಳ್ಳಿ ಪದಕವನ್ನು ನಿನ್ನೆ ಭಾರತ ಎರಡು ಬೆಳ್ಳಿ ಪದಕ ಗೆದ್ದಿದೆ.

 

Source: publictv.in Source link