ED ದಾಳಿ ಶಾಕ್​​: ಇನ್ನೂ ಮಲಗಿಯೇ ಇರುವ ಜಮೀರ್​​

ED ದಾಳಿ ಶಾಕ್​​: ಇನ್ನೂ ಮಲಗಿಯೇ ಇರುವ ಜಮೀರ್​​

ಐಎಂಎ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ED ಅಧಿಕಾರಿಗಳು ಕಾಂಗ್ರೆಸ್​ ಶಾಸಕ ಜಮೀರ್​​ ಅಹ್ಮದ್​​ ಖಾನ್​​​​ ಮನೆ ಮೇಲೆ ದಾಳಿ ನಡೆಸಿದರು. ಗುರುವಾರ ಬೆಳಿಗ್ಗೆಯಿಂದ ಸತತ 24 ಗಂಟೆಗಳ ಕಾಲ ಜಮೀರ್​​ ಅಹ್ಮದ್​​ ಖಾನ್​​ರನ್ನು ED ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಆದರೀಗ, ED ಶಾಕ್​​ ಬೆನ್ನಲ್ಲೇ ಜಮೀರ್​​​ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜಮೀರ್​​ ಭೇಟಿಗಾಗಿ ಯಾರೇ ನಿವಾಸಕ್ಕೆ ಬಂದರೂ ಮಾತಾಡದೆ ಮಲಗಿದ್ದಾರಂತೆ. ನಿವೃತ್ತ ಪೊಲೀಸ್ ಅಧಿಕಾರಿ‌ ಜಿಎ ಭಾವ ಜಮೀರ್​​​ ನಿವಾಸಕ್ಕೆ ಬಂದು ವಾಪಸ್ಸಾಗಿದ್ದಾರೆ. ED ಶಾಕ್​​ನಿಂದ ಇಡೀ ರಾತ್ರಿ ನಿದ್ದೆಯಿಲ್ಲದೇ ಜಮೀರ್​​ ಎದ್ದಿದ್ದರು. ಇವಾಗ ಬೆಳಿಗ್ಗೆಯಿಂದ ಇನ್ನೂ ಜಮೀರ್​​ ಮಲಗಿದ್ದು, ಜಿಎ ಭಾವರನ್ನು ಭೇಟಿ ಮಾಡಲಿಲ್ಲ ಎಂದು ತಿಳಿದು ಬಂದಿದೆ.

Source: newsfirstlive.com Source link