ಕುಸ್ತಿಯಲ್ಲಿ ಪದಕದ ಭರವಸೆ ಮೂಡಿಸಿದ ಬಜರಂಗ್‌ ಪೂನಿಯಾ

ಕುಸ್ತಿಯಲ್ಲಿ ಪದಕದ ಭರವಸೆ ಮೂಡಿಸಿದ ಬಜರಂಗ್‌ ಪೂನಿಯಾ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಸ್ಟಾರ್​ ಕುಸ್ತಿಪಟು ಬಜರಂಗ್‌ ಪೂನಿಯಾ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ 65 ಕೆಜಿ ಫ್ರೀ ಸ್ಟೈಲ್ ವಿಭಾಗದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಇರಾನ್​​​ನ ಮೊರ್ತೆಜಾ ಘಿಯಾಸಿಯನ್ನ 2-1 ಅಂಕಗಳ ಅಂತರದಿಂದ ಮಣಿಸಿದ ಬಜರಂಗ್‌ ಪೂನಿಯಾ, ಚೊಚ್ಚಲ ಒಲಿಂಪಿಕ್ಸ್‌ ಪದಕಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಈ ಪಂದ್ಯದ ಮೊದಲ ಸುತ್ತಿನಲ್ಲಿ ಇರಾನಿನ ಕುಸ್ತಿಪಟು 1-0 ಮುನ್ನಡೆ ಸಾಧಿಸಿದರೆ, ಎರಡನೇ ಸುತ್ತಿನಲ್ಲಿ ಭಾರತದ ಕುಸ್ತಿ ಪಟು ಬಜರಂಗ್‌ ಪೂನಿಯಾ 2 ಅಂಕಗಳನ್ನು ಗಳಿಸುವ ಮೂಲಕ, ಮೇಲುಗೈ ಸಾಧಿಸಿದರು. ಆ ಮೂಲಕ ಒಂದು ನಿಮಿಷ ಬಾಕಿ ಇರುವಂತೆ ಗೆಲುವಿನ ನಗೆ ಬೀರಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಇದರೊಂದಿಗೆ ಪೂನಿಯಾ, ಭಾರತಕ್ಕೆ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

Source: newsfirstlive.com Source link