ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ದೆಹಲಿಯಲ್ಲಿ ಸಂತೋಷ್​ ಭೇಟಿ ಬಗ್ಗೆ ಅವರು ಹೇಳಿದ್ದೇನು?

ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ದೆಹಲಿಯಲ್ಲಿ ಸಂತೋಷ್​ ಭೇಟಿ ಬಗ್ಗೆ ಅವರು ಹೇಳಿದ್ದೇನು?

ಬೆಂಗಳೂರು:  ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್​ ರಾಜಕೀಯ ಸೇರುತ್ತಾರೆ ಅನ್ನೋ ವದಂತಿ ಮತ್ತಷ್ಟು ದಟ್ಟವಾಗಿದೆ. ಅದಕ್ಕೆ ಕಾರಣ ಇತ್ತೀಚೆಗೆ ಅವರು ಬಿಜೆಪಿ ವರಿಷ್ಠರನ್ನ ಭೇಟಿಯಾಗಿರೋದು! ಈ ಮೂಲಕ ಕರ್ನಾಟಕದ ಸಿಂಗಂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ:ಬಳ್ಳಾರಿ MP ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ: ದೆಹಲಿಯಲ್ಲಿ ಬಿಎಲ್​ ಸಂತೋಷ್ ಭೇಟಿಯಾದ ರವಿ ಚನ್ನಣ್ಣನವರ್

ರವಿ ಡಿ ಚನ್ನಣ್ಣನವರ್ ಅವರು ಕಳೆದ ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿ.ಎಲ್​​ ಸಂತೋಷ್​​ರ ನಿವಾಸದಲ್ಲಿ ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅವರು ಬಳ್ಳಾರಿಯ ಎಸ್​ಟಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಪಡೆದು ಸ್ಪರ್ಧಿಸುತ್ತಾರೆ ಅನ್ನೋ ಸಂಗತಿ ಕೂಡ ಚರ್ಚೆಯ ಮುನ್ನಲೆಗೆ ಬಂದಿತ್ತು. ಆದ್ರೆ ಸದ್ಯಕ್ಕೆ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.

ರವಿ ಚನ್ನಣ್ಣನವರ್ ಕೊಟ್ಟ ಸ್ಪಷ್ಟನೆ ಏನು?

ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್​ ರಾಜಕೀಯ ಸೇರುತ್ತಾರೆ ಅನ್ನೋ ವದಂತಿ ದಟ್ಟವಾಗುತ್ತಿದ್ದ ಬೆನ್ನಲ್ಲೇ ಸ್ವತಃ ರವಿ ಡಿ. ಚನ್ನಣ್ಣನವರ್​ ಈ ಕುರಿತು ಸ್ಪಷ್ಟನೆ ನೀಡಿದ್ದು ನಾನು ರಾಜಕೀಯಕ್ಕೆ ಸೇರುವ ಕುರಿತಂತೆ ಹಬ್ಬಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು ನಾನು ‘ಭರವಸೆ’ ಎಂಬ ಪುಸ್ತಕ ಬರೆಯುತ್ತಿದ್ದು ಅದರ ನಿಮಿತ್ತ ಇತ್ತೀಚಿಗೆ ನನ್ನ ರಜೆಯ ದಿನದ ಸಮಯದಲ್ಲಿ ನನ್ನ ಹಳೇಯ ಸ್ನೇಹಿತರು, ಮತ್ತು ದೇವಸ್ಥಾನಗಳು, ಹಾಗೂ ಶ್ರೀಮಠಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದೆನೆ ಅಷ್ಟೇ. ಆದರೆ ಕೆಲವು ಮಾಧ್ಯಮಗಳು ಇದಕ್ಕೆ ಅಪಾರ್ಥ ಕಲ್ಪಿಸಿ ರಾಜಕೀಯ ಸೇರುತ್ತಿರುವದಾಗಿ ಸುದ್ದಿ ಬಿತ್ತರಿಸುತ್ತಿವೆ. ಅದಕ್ಕೆ ಯಾವುದೇ ವಿಶೇಷತೆ ಇಲ್ಲ. ನಾನು ರಾಜಕೀಯ ಸೇರುತ್ತಿರುವ ವಿಚಾರ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

 

Source: newsfirstlive.com Source link