ಭಾರತಕ್ಕೆ ಬರುತ್ತಾ ಸಿಂಗಲ್ ಡೋಸ್ ವ್ಯಾಕ್ಸಿನ್? ಅನುಮತಿ ಕೋರಿ ಜಾನ್ಸನ್ & ಜಾನ್ಸನ್ ಅರ್ಜಿ

ಭಾರತಕ್ಕೆ ಬರುತ್ತಾ ಸಿಂಗಲ್ ಡೋಸ್ ವ್ಯಾಕ್ಸಿನ್? ಅನುಮತಿ ಕೋರಿ ಜಾನ್ಸನ್ & ಜಾನ್ಸನ್ ಅರ್ಜಿ

ಕೊರೊನಾ ವಿರುದ್ಧದ ಹೋರಾಟ ಇನ್ನೂ ಭರದಿಂದಲೇ ಭಾರತದಲ್ಲಿ ಸಾಗುತ್ತಿದೆ. ಸರಿ ಸುಮಾರು 50 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ನಿಡಲಾಗಿದ್ದರೂ ಸೋಂಕು ಮಾತ್ರ ತಗ್ಗುವ ಸೂಚನೆ ಕಾಣುತ್ತಿಲ್ಲ. ಇಂದೂ ದೇಶದಲ್ಲಿ ಬರೋಬ್ಬರಿ 44 ಸಾವಿರ ಹೊಸ ಸೋಂಕು ಪತ್ತೆಯಾಗಿದೆ. ಹೀಗಾಗಿ ದೇಶದಲ್ಲಿ ವ್ಯಾಕ್ಸಿನ್​​ ನೀಡುವ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಹೊಸ ವ್ಯಾಕ್ಸಿನ್​ಗಳಿಗೆ ಕೂಡ ಅನುಮತಿ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇದೇ ಹಿನ್ನೆಲೆಯಲ್ಲಿ ಅಮೆರಿಕಾದ ಮತ್ತೊಂದು ಸಂಸ್ಥೆ ಎಮರ್ಜನ್ಸಿ ಅನುಮತಿ ಕೋರಿ ಈಗ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.

ಹೌದು, ವಿಶ್ವದಲ್ಲಿ ಸದ್ಯದ ಮಟ್ಟಿಗೆ ನೀಡಲಾಗ್ತಿರೋ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಒಂದೇ ಡೋಸ್ ವ್ಯಾಕ್ಸಿನ್​​​ ​ತುರ್ತು ಬಳಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಡ್ರಗ್ಸ್​​ ಕಂಟ್ರೋಲರ್​​ ಜನರಲ್​ ಆಫ್​ ಇಂಡಿಯಾಕ್ಕೆ ಅರ್ಜಿ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ ಸಲ್ಲಿಸಿದ್ದು, ಅನುಮತಿ ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಒಂದು ವೇಳೆ ಇದಕ್ಕೂ ಅನುಮತಿ ಸಿಕ್ಕರೆ ದೇಶದಲ್ಲಿ ಸದ್ಯ ನೀಡಲಾಗ್ತಿರೋ ಕೊವ್ಯಾಕ್ಸಿನ್, ಕೋವೀಶೀಲ್ಡ್, ಸ್ಫುಟ್ನಿಕ್ ಹಾಗೂ ಮಾಡರ್ನಾ ವ್ಯಾಕ್ಸಿನ್​ ಸಾಲಿಗೆ ಜಾನ್ಸನ್ ಅಂಡ್ ಜಾನ್ಸನ್ ಕೂಡ ಸೇರಲಿದೆ.

 

Source: newsfirstlive.com Source link