ಚಕ್​ ದೇ ಇಂಡಿಯಾ ಈಗ ಚೆಕ್​ ದೇ ಧನಾ ಧನ್ ಇಂಡಿಯಾ.. ಹಾಕಿ ಪ್ಲೇಯರ್ಸ್​​ಗೆ ಲಕ್ಷ ಲಕ್ಷ ಹಣ

ಚಕ್​ ದೇ ಇಂಡಿಯಾ ಈಗ ಚೆಕ್​ ದೇ ಧನಾ ಧನ್ ಇಂಡಿಯಾ.. ಹಾಕಿ ಪ್ಲೇಯರ್ಸ್​​ಗೆ ಲಕ್ಷ ಲಕ್ಷ ಹಣ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ಹಾಕಿ ತಂಡಕ್ಕೆ ಹರಿಯಾಣ ಸರ್ಕಾರ ಭರ್ಜರಿ ಉಡುಗೊರೆ ಘೋಷಣೆ ಮಾಡಿದೆ. ಈ ಸಂಬಂಧ ಟ್ವೀಟ್​​ ಮಾಡಿರುವ ಮುಖ್ಯಮಂತ್ರಿ ಮನೋಹರ್​ ಲಾಲ್​​​ ಖಟ್ಟರ್​​​, ಹರಿಯಾಣ ಸರ್ಕಾರ ರಾಜ್ಯದ ಒಂಬತ್ತು ಮಹಿಳಾ ಹಾಕಿ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ಗೌರವಧನ ನೀಡುವುದಾಗಿ ಘೋಷಿಸಿದ್ದಾರೆ.

ಇಂದು ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿದರೂ ಸೋಲಬೇಕಾಯ್ತು. 3-4 ಅಂತರದಲ್ಲಿ ಸೋತ ನಂತರ ಭಾರತ ಮಹಿಳಾ ಹಾಕಿ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.

ಇನ್ನು, ಪದಕ ಗೆಲ್ಲದೇ ಹೋದರು ಉತ್ತಮ ಪ್ರದರ್ಶನ ನೀಡುವ ಮೂಲಕ ಮಹಿಳಾ ಹಾಕಿ ತಂಡ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದರು. ಈಗ ಭಾರತದ ಪರ ಆಡಿದ ಹರಿಯಾಣದ ಒಲಂಪಿಕ್ ಮಹಿಳಾ ಹಾಕಿ ತಂಡದ ಒಂಬತ್ತು ಸದಸ್ಯರಿಗೆ ಮೋಹನ್​​ ಲಾಲ್​​ ಖಟ್ಟರ್​​ ಸರ್ಕಾರ ತಲಾ 50 ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: ಪದಕ ಗೆದ್ದ ಹಾಕಿ ತಂಡಕ್ಕೆ ಜಾಕ್​​ಪಾಟ್​​; ಹರಿಯಾಣದ ಇಬ್ಬರು ಆಟಗಾರರಿಗೆ ಕೋಟಿ ಕೋಟಿ ಹಣ

Source: newsfirstlive.com Source link