ಟೋಕಿಯೋ ಒಲಿಪಿಂಕ್ಸ್​ನಲ್ಲಿ ಇತಿಹಾಸ ನಿರ್ಮಿಸುವತ್ತ ಬೆಂಗಳೂರಿನ ಅದಿತಿ ಅಶೋಕ್..!

ಟೋಕಿಯೋ ಒಲಿಪಿಂಕ್ಸ್​ನಲ್ಲಿ ಇತಿಹಾಸ ನಿರ್ಮಿಸುವತ್ತ ಬೆಂಗಳೂರಿನ ಅದಿತಿ ಅಶೋಕ್..!

ಟೋಕಿಯೋ ಒಲಿಪಿಂಕ್ಸ್​ನಲ್ಲಿ ಭಾರತದ ಗಾಲ್ಫರ್ ಅದಿತಿ ಅಶೋಕ್ ಪದಕ ಬೇಟೆಯ ಭರವಸೆ ಮೂಡಿಸಿದ್ದಾರೆ. 23 ವರ್ಷದ ಅದಿತಿ, ಟೋಕಿಯೋ ಓಲಿಪಿಂಕ್ಸ್​ನಲ್ಲಿ ಐತಿಹಾಸಿಕ ಸಾಧನೆ ಮಾಡುವತ್ತ ಮುನ್ನಡೆದಿದ್ದಾರೆ. ಇಂದು ಮುಕ್ತಾಯಗೊಂಡ 3ನೇ ಸುತ್ತಿನಲ್ಲಿ ವಿಶ್ವ ನಂಬರ್.1 ಗಾಲ್ಫ್​​ ಆಟಗಾರ್ತಿಯಾ​ ಅಮೆರಿಕದ ನೆಲ್ಲಿ ಕೋರ್ಡಾ 15 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅದ್ಬುತ ಆಟ ಪ್ರದರ್ಶಿಸಿದ ಬೆಂಗಳೂರಿನ ಅದಿತಿ ಅಶೋಕ್​, 12 ಅಂಕಗಳೊಂದಿಗೆ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 10 ಅಂಕಗಳೊಂದಿಗೆ ನ್ಯೂಜಿಲೆಂಡ್​ನ ಕೊ ಲಿಡ್ಯಾ ಮೂರನೇ ಸ್ಥಾನದಲ್ಲಿದ್ದಾರೆ. ನಾಳೆ ನಡೆಯಲಿರುವ ಅಂತಿಮ ಸುತ್ತಿನಲ್ಲಿ ಅದಿತಿ ಅಶೋಕ್​​, ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಭಾರತಕ್ಕೆ ಪದಕ ಗ್ಯಾರೆಂಟಿ. ಬೆಂಗಳೂರು ಬೆಡಗಿ ಅದಿತಿಗೆ, ದೇಶದ್ಯಾಂತ ಕ್ರೀಡಾಭಿಮಾನಿಗಳು ಶುಭ ಕೋರುತ್ತಿದ್ದಾರೆ.

Source: newsfirstlive.com Source link