ಹಾರ್ದಿಕ್ ಸ್ಥಾನ ಕಸಿದ ಶಾರ್ದೂಲ್​ಗೆ ಕೊಹ್ಲಿ ‘ಮಲ್ಟಿ ಡೈಮೆನ್ಷನಲ್ ಪ್ಲೇಯರ್’ ಅಂದಿದ್ಯಾಕೆ..

ಹಾರ್ದಿಕ್ ಸ್ಥಾನ ಕಸಿದ ಶಾರ್ದೂಲ್​ಗೆ ಕೊಹ್ಲಿ ‘ಮಲ್ಟಿ ಡೈಮೆನ್ಷನಲ್ ಪ್ಲೇಯರ್’ ಅಂದಿದ್ಯಾಕೆ..

ಟೆಸ್ಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಸದ್ಯ ಶಾರ್ದೂಲ್​ ಠಾಕೂರ್​ ಪಾಲಾಗಿದೆ. ಇದರ ಜೊತೆಗೆ ಶಾರ್ದೂಲ್​ರನ್ನ ಕೊಹ್ಲಿ, ಮಲ್ಟಿ ಡೈಮೆನ್ಷನಲ್ ಪ್ಲೇಯರ್ ಎಂದು ಹೇಳಿರೋದು ಟಿ20 ವಿಶ್ವಕಪ್​​ನಲ್ಲೂ ಸ್ಥಾನ ಪಕ್ಕಾನಾ ಎಂಬ ಅನುಮಾನ ಹುಟ್ಟು ಹಾಕಿದೆ.

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​​ಗೂ ಮುನ್ನ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಆಡಿದ ಮಾತಿದು. ಮಲ್ಟಿ ಡೈಮೆನ್ಷನಲ್ ಪ್ಲೇಯರ್​​ ಎಂದು ಕೊಹ್ಲಿ ಹೇಳಿರುವ ಪದ ಆಲ್​ರೌಂಡರ್ ಶಾರ್ದೂಲ್ ಠಾಕೂರ್​ಗೆ ಸರಿಯಾಗೇ ಅನ್ವಯಿಸುತ್ತೆ.. ಯಾಕಂದ್ರೆ,​​ ಆಲ್​ರೌಂಡರ್ ಆಗಿ​ ಶಾರ್ದೂಲ್ ನೀಡಿರುವ ಪ್ರದರ್ಶನ ಹಾಗಿದೆ.

blank

ಟಿ20 ಕ್ರಿಕೆಟ್​​ನಲ್ಲಿ ವಿಕೆಟ್​ ಕಬಳಿಸುವ ಚಾಣಾಕ್ಷತೆ, ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಸಾಮರ್ಥ್ಯ ಹೊಂದಿರೋ ಶಾರ್ದೂಲ್​, ಇದೀಗ ಟೆಸ್ಟ್​ ಮಾದರಿಯಲ್ಲೂ ಛಾಪು ಮೂಡಿಸುತ್ತಿದ್ದಾರೆ. ವಿಭಿನ್ನ ಪರಿಸ್ಥಿತಿಗಳಿಗೆ ಅನುಗುಣವಾಗಿ ತಂಡಕ್ಕೆ ನೆರವಾಗುವ ಶಾರ್ದೂಲ್​, ಸದ್ಯ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್​ ಪ್ಲೇಯರ್​ ಅಂದ್ರೆ ತಪ್ಪಾಗಲ್ಲ. ಇದೇ ಕಾರಣಕ್ಕೆ ಈತ ನಾಯಕನ ಪಾಲಿನ ಮಲ್ಟಿ ಡೈಮೆನ್ಷನಲ್ ಪ್ಲೇಯರ್ ಆಗಿ ಗುರುತಿಸಿಕೊಂಡಿರೋದು…!

ಟೆಸ್ಟ್​ನಲ್ಲಿ ಹಾರ್ದಿಕ್ ಸ್ಥಾನ ತುಂಬಿದ ಶಾರ್ದೂಲ್..!

ತವರಿನಲ್ಲಿ ಬ್ಯಾಲೆನ್ಸಿಂಗ್ ಆಗಿ ಕಾಣುತ್ತಿದ್ದ ಟೀಮ್ ಇಂಡಿಯಾದ ಟೆಸ್ಟ್ ತಂಡ, ವಿದೇಶದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಲ ವರ್ಷಗಳಿಂದಲೇ ಹೆಣಗಾಡುತ್ತಿದೆ. ಅದ್ರಲ್ಲೂ ಹಾರ್ದಿಕ್ ಪಾಂಡ್ಯರ ಅಲಭ್ಯತೆಯಂತೂ ಪದೇ ಪದೇ ತಂಡವನ್ನ ಕಾಡಿದೆ. ಇಡೀ ತಂಡದ ಈ ವೀಕ್​ನೆಸ್​ಗೆ ಸಿಕ್ಕ ಉತ್ತರವೇ ಶಾರ್ದೂಲ್​. ಆಸ್ಟ್ರೇಲಿಯಾ ಪ್ರವಾಸದಲ್ಲಿ ಈತ ಮಾಡಿದ ಮೋಡಿ ಇದೀಗ ಇಂಗ್ಲೆಂಡ್​ ವಿರುದ್ಧವೂ ಪ್ಲೇಯಿಂಗ್​ ಇಲೆವೆನ್​ ಟಿಕೆಟ್​ ನೀಡಿದೆ.

blank

ಟಿ20 ವಿಶ್ವಕಪ್​ ಟಿಕೆಟ್​ಗೂ ದೀಪಕ್​ ಜೊತೆ ಫೈಟ್​​.!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾರು ಸ್ಥಾನ ಪಡೀತಾರೆ ಅನ್ನೋದು ಸದ್ಯ ಹಾಟ್​ ಸಬ್ಜೆಕ್ಟ್​ ಆಗಿದೆ. ಈ ಪೈಕಿ ಸ್ಪೀಡ್​​ ಆಲ್​ರೌಂಡರ್​​ ಕೋಟಾದಲ್ಲಿ ದೀಪಕ್ ಚಹರ್​​ ಹೆಸರು ಬಲವಾಗಿ ಕೇಳಿ ಬರ್ತಿದೆ. ಆದ್ರೆ, ಈಗ​ ಚಹರ್​ರನ್ನ ಶಾರ್ದೂಲ್​ ಸೈಡ್​ ಲೈನ್​ ಮಾಡಿದ್ರೂ ಅಚ್ಚರಿಯಿಲ್ಲ. ವಿರಾಟ್​​ ಕೊಹ್ಲಿ ನೀಡಿದ ಮಲ್ಟಿ ಡೈಮೆನ್ಷನಲ್ ಪ್ಲೇಯರ್ ಹೇಳಿಕೆ ಈ ತೆರನಾದ ಚರ್ಚೆಗೆ ಕಾರಣವಾಗಿದೆ. ಆದ್ರೆ, ಇದೇ ಟೆಂಪರ್​ಮೆಂಟ್​​ ಅನ್ನ ಮುಂದಿನ ದಿನಗಳಲ್ಲಿ ಶಾರ್ದೂಲ್​ ಕಾಯ್ದುಕೊಳ್ತಾರಾ ಅನ್ನೋದರ ಮೇಲೆ ಅಂತಿಮ ನಿರ್ಧಾರ ನಿಂತಿದೆ.

 

Source: newsfirstlive.com Source link