ದೇಶದ ಉನ್ನತ ಕ್ರೀಡಾ ಪ್ರಶಸ್ತಿ ಹೆಸರು ಬದಲು; ಇನ್ನು ರಾಜೀವ್ ಗಾಂಧಿ ಅಲ್ಲ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’

ದೇಶದ ಉನ್ನತ ಕ್ರೀಡಾ ಪ್ರಶಸ್ತಿ ಹೆಸರು ಬದಲು; ಇನ್ನು ರಾಜೀವ್ ಗಾಂಧಿ ಅಲ್ಲ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧಕರಿಗೆ ಕೊಡಲ್ಪಡುವ ದೇಶದ ಅತ್ಯುನ್ನತ ಪ್ರಶಸ್ತಿಯ ಹೆಸರನ್ನ ಕೇಂದ್ರ ಸರ್ಕಾರ ಬದಲಾವಣೆ ಮಾಡದೆ. ರಾಜೀವ್ ಗಾಂಧಿ ಖೇಲ್​ ರತ್ನ ಬದಲಾಗಿ ಮೇಜರ್ ಧ್ಯಾನ್​ ಚಂದ್​ ಖೇಲ್​ ರತ್ನ ಎಂದು ಮರುನಾಮಕರಣ ಮಾಡಲಾಗಿದೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಭಾರತದ ಹಾಕಿ ಇತಿಹಾಸದಲ್ಲಿ ಧ್ಯಾನ್ ಚಂದ್ ದೊಡ್ಡ ಹೆಸರು ತುಂಬಾ ದೊಡ್ಡದು. ಧ್ಯಾನ್ ಚಂದ್ ಮೂರು ಬಾರಿ ಪ್ರಶಸ್ತಿಗಳನ್ನ ತಂದುಕೊಟ್ಟಿದ್ದಾರೆ. 1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆಲ್ಲಲು ಕಾರಣವಾಗಿದ್ದರು.

Source: newsfirstlive.com Source link