ಜಮೀರ್​​ ಭೇಟಿಗೆ ಬಂದ ರೌಡಿಶೀಟರ್​​ ಸ್ಕ್ರ್ಯಾಪ್​​ ಬಾಬು; ಏಯ್​​ ಬೇಡ ನಡಿ ಎಂದ ಶಾಸಕ

ಜಮೀರ್​​ ಭೇಟಿಗೆ ಬಂದ ರೌಡಿಶೀಟರ್​​ ಸ್ಕ್ರ್ಯಾಪ್​​ ಬಾಬು; ಏಯ್​​ ಬೇಡ ನಡಿ ಎಂದ ಶಾಸಕ

ಎಐಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್​ ಅಹ್ಮದ್​ ಖಾನ್​​​ ಹೆಸರು ಕೇಳಿ ಬಂದ ಕಾರಣ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀರ್​ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 24 ಗಂಟೆ ವಿಚಾರಣೆ ನಡೆಸಿದರು. ಇಡಿ ಶಾಕ್​​​ ಬೆನ್ನಲ್ಲೀಗ ಜಮೀರ್​​ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬೆಳಿಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ‌ ಜಿಎ ಭಾವ ಬಂದರೂ ಭೇಟಿ ಮಾಡದೆ ವಾಪಸ್ಸು ಕಳಿಸಿದ್ದ ಜಮೀರ್​​​​ ಯಾರನ್ನು ಮೀಟ್​​ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಈಗ ಜಮೀರ್​​ ಭೇಟಿಗೆ ಬಂದ ರೌಡಿಶೀಟರ್​​  ಎನ್ನಲಾದ ಸ್ಕ್ರ್ಯಾಪ್​​ ಬಾಬು ಕೂಡ ವಾಪಸ್ಸಾಗಿದ್ದಾರಂತೆ. ಸ್ಕ್ರ್ಯಾಪ್​​ ಬಾಬುಗೆ ಏಯ್​​ ಬೇಡ ನಡಿ ಎಂದು ಜಮೀರ್​​ ವಾಪಸ್ಸು ಕಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ED ದಾಳಿ ಶಾಕ್​​: ಇನ್ನೂ ಮಲಗಿಯೇ ಇರುವ ಜಮೀರ್​​

Source: newsfirstlive.com Source link