Big Breaking: ರಮೇಶ್ ಜಾರಕಿಹೊಳಿ ಮನೆಯಲ್ಲಿ ‘ಮಿಡ್​ನೈಟ್ ಸೀಕ್ರೆಟ್ ಮೀಟ್’

Big Breaking: ರಮೇಶ್ ಜಾರಕಿಹೊಳಿ ಮನೆಯಲ್ಲಿ ‘ಮಿಡ್​ನೈಟ್ ಸೀಕ್ರೆಟ್ ಮೀಟ್’

ಬೆಂಗಳೂರು: ಮೊನ್ನೆಯಷ್ಟೇ ಸಚಿವ ಸಂಪುಟ ವಿಸ್ತರಣೆ ಮಾಡಿ ನಿಟ್ಟುಸಿರು ಬಿಟ್ಟದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೂ ನೂತನ ಸಚಿವರಿಗೆ ಜವಾಬ್ದಾರಿಯನ್ನ ನೀಡಿಲ್ಲ. ಖಾತೆ ಹಂಚಿದ ಬಳಿಕ ತಾವು ನಿರೀಕ್ಷಿಸಿದ ಖಾತೆ ಸಿಗದಿದ್ದರೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಇದರ ಜೊತೆಗೆ ಈಗಾಗಲೇ ಸಚಿವ ಸ್ಥಾನದಿಂದ ವಂಚಿತರಾದ ನಾಯಕರ ಅಸಮಾಧಾನ ಶಮನ ಮಾಡೋದು ಬೊಮ್ಮಾಯಿ ಮುಂದೆ ದೊಡ್ಡ ಚಾಲೆಂಜ್ ಇದೆ.

ಇದನ್ನೂ ಓದಿ: ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ದೆಹಲಿಯಲ್ಲಿ ಸಂತೋಷ್​ ಭೇಟಿ ಬಗ್ಗೆ ಅವರು ಹೇಳಿದ್ದೇನು?

ಇದರ ಮುಂದುವರಿದ ಭಾಗವಾಗಿ ನಿನ್ನೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಗೌಪ್ಯ ಸಭೆ ನಡೆದಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ನಿನ್ನೆ ತಡರಾತ್ರಿ ಸಭೆ ನಡೆದಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಅಸಮಾಧಾನಿತ ಎಲ್ಲಾ ಶಾಸಕರು ಸಭೆ ಸೇರಿದ್ದರು. ರಮೇಶ್ ಜಾರಕಿಹೊಳಿ, ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ್, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಬಾಲಚಂದ್ರ ಜಾರಕಿಹೊಳಿ ಈ ಸಭೆಯಲ್ಲಿ ಭಾಗಿಯಾಗಿದ್ದರು ಅಂತಾ ಹೇಳಲಾಗಿದೆ.

ಸಭೆಯಲ್ಲಿ ಏನೆಲ್ಲಾ ಚರ್ಚೆ..?
ರಮೇಶ್ ಜಾರಕಿಹೊಳಿಯ ಜೊತೆಗೆ ಗುರುತಿಸಿಕೊಂಡಿದ್ದ ಶ್ರೀಮಂತ ಪಾಟೀಲ್‌ಗೆ ಯಡಿಯೂರಪ್ಪರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿತ್ತು. ಈಗ ಶ್ರೀಮಂತ ಪಾಟೀಲ್‌ರನ್ನು ಹೊರಗಿಡಲಾಗಿದೆ. ಇನ್ನು ರಮೇಶ್ ಜಾರಕಿಹೊಳಿ ಪ್ರಕರಣ ಇತ್ಯರ್ಥವಾಗಿಲ್ಲ. ಇತ್ತ ಅರವಿಂದ ಬೆಲ್ಲದ್ ಹೆಸರನ್ನು ಸಿಎಂ ರೇಸ್‌ನಲ್ಲಿಟ್ಟು, ಕೊನೆಯದಾಗಿ ಕೈಬಿಡಲಾಗಿದ್ದು, ಸಚಿವ ಸ್ಥಾನವನ್ನು ನೀಡಿಲ್ಲ. ಇತ್ತ ಬಾಲಚಂದ್ರ ಜಾರಕಿಹೊಳಿ ಅಂತೂ ಕ್ಯಾಬಿನೆಟ್ ಸೇರ್ಪಡೆಯಾಗುವುದಿಲ್ಲ ಎಂದಿದ್ರು.

ಇದನ್ನೂ ಓದಿ: ED ದಾಳಿ ಶಾಕ್​​: ಇನ್ನೂ ಮಲಗಿಯೇ ಇರುವ ಜಮೀರ್​​

ಇನ್ನು ಸಿ.ಪಿ.ಯೋಗೇಶ್ವರ್, ಯಡಿಯೂರಪ್ಪರ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಕಾರಣ ಸಚಿವ ಸ್ಥಾನದಿಂದ ಕೊಕ್ ಕೊಡಲಾಗಿದೆ‌ ಅಂತಾ ಹೇಳಲಾಗಿದೆ. ಹೀಗಾಗಿ ಮುಂದೆ ರಾಜಕಾರಣ ಹೇಗೆ ಮಾಡಬೇಕೆಂದು ಅನ್ನೋದ್ರ ಬಗ್ಗೆ ಅಸಮಾಧಾನಿತ ಶಾಸಕರು ಚರ್ಚೆ ಮಾಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಾಯಕರುಗಳು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: IT, EDಗೆ ಡಿಕೆಎಸ್​ ತುಂಬಾ ಕ್ಲೋಸ್​, ಜಮೀರ್ ಮನೆ ಮೇಲೆ ಅವ್ರೇ ದಾಳಿ ಮಾಡಿಸಿರಬಹುದು- ಎಸ್​.ಟಿ.ಸೋಮಶೇಖರ್

Source: newsfirstlive.com Source link