ನಿನ್ನೆನೇ ಹೇಳಿದ್ವಿ..! ಕಂಬಳದ ಉಸೇನ್ ಬೋಲ್ಟ್​ ಆಗ್ತಿದ್ದಾರೆ ರಿಷಬ್ ಶೆಟ್ಟಿ..

ನಿನ್ನೆನೇ ಹೇಳಿದ್ವಿ..! ಕಂಬಳದ ಉಸೇನ್ ಬೋಲ್ಟ್​ ಆಗ್ತಿದ್ದಾರೆ ರಿಷಬ್ ಶೆಟ್ಟಿ..

‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎನ್ನುವ ಮೂಲ ಅಭಿಮಾನಿಗಳ ಎದೆಗೆ ಹುಳು ಬಿಟ್ಟಿದ್ದ ಹೊಂಬಾಳೆ ಫಿಲಂಸ್​​ ತನ್ನ ನೂತನ ಚಿತ್ರದ ಟೈಟಲ್​ ಅನೌನ್ಸ್​ ಘೋಷಣೆ ಮಾಡಿದೆ. ಈ ಮೂಲಕ ಹೊಂಬಾಳೆಯ ನೂತನ ಸಿನಿಮಾದ ಸಾರಥಿ ಯಾರು? ಹೀರೋ ಯಾರು ಅನ್ನೋ ಕುತೂಹಲಕ್ಕೆ ಇಂದು ತೆರೆ ಎಳೆದಿದ್ದು, ಇದಕ್ಕೆಲ್ಲಾ ರಿಷಬ್ ಶೆಟ್ಟಿಯೇ ಸೂತ್ರಧಾರ ಅಂತಾ ಹೊಂಬಾಳೆ ಫಿಲಂಸ್ ಹೇಳಿದೆ.

ಹೌದು..ಕ್ರಿಯೇಟಿವ್ ಡೈರೆಕ್ಷನ್ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆಗಿರುವ ಹೆಗ್ಗುರುತು ಕ್ರಿಯೇಟ್ ಮಾಡ್ಕೊಂಡಿರೋ ರಿಷಬ್ ಶೆಟ್ಟಿ, ಹೊಂಬಾಳೆಯ 11ನೇ ಚಿತ್ರಕ್ಕೆ ನಾಯಕ ಮತ್ತು ನಾವಿಕ. ಇನ್ನು ಈ ಚಿತ್ರಕ್ಕೆ ‘ಕಾಂತಾರ’ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಒಂದನ್ನ ಸಹ ಚಿತ್ರ ತಂಡ ಬಿಡುಗಡೆ ಮಾಡಿದೆ. ಆಗಸ್ಟ್​ 27 ರಿಂದ ‘ಕಾಂತಾರ’ ಚಿತ್ರದ ಶೂಟಿಂಗ್​ನಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಆಗಲಿದ್ದಾರೆ.

blank

ಪೋಸ್ಟರ್ ಏನ್ ಹೇಳ್ತಿದೆ..?
ಮೇಲ್ನೋಟಕ್ಕೆ ಬೆಂಕಿಯ ಜ್ವಾಲೆಯಂತೆ ಕಂಗಳಿಸುತ್ತಿರುವ ಚಿತ್ರದ ಪೋಸ್ಟರ್​​ ವಿಭಿನ್ನವಾದ ಕಥಾ ಹಂದರವನ್ನ ಹೇಳ್ತಿದೆ. ಕರಾವಳಿ ಭಾಗದ ಭೂತಾರಾಧನೆ ಹಾಗೂ ಕಂಬಳ ಕ್ರೀಡೆಗೆ ಸಂಬಂಧಿಸಿದ ಕಥೆಯನ್ನ ಚಿತ್ರದ ಪೋಸ್ಟರ್ ಹೇಳ್ತಿದೆ. ಈ ಮೂಲಕ ರಿಷಬ್ ಶೆಟ್ಟಿ ಕಂಬಳದ ಉಸೇನ್ ಬೋಲ್ಟ್​ ಆಗಲು ಹೊರಟಿದ್ದಾರೆ ಅಂತಾ ಅವ್ರ ಅಭಿಮಾನಿಗಳು ಹೇಳ್ತಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ.. ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ‌. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆ ಇದೆ ಎಂದು ಬರೆದುಕೊಂಡಿದ್ದಾರೆ.

 

Source: newsfirstlive.com Source link