ದಯವಿಟ್ಟು ಅಳಬೇಡಿ, ನಿಮ್ಮ ಬಗ್ಗೆ ಹೆಮ್ಮೆ ಇದೆ -ಮಹಿಳಾ ಹಾಕಿ ತಂಡಕ್ಕೆ ಮೋದಿ ಶುಭಾಶಯ

ದಯವಿಟ್ಟು ಅಳಬೇಡಿ, ನಿಮ್ಮ ಬಗ್ಗೆ ಹೆಮ್ಮೆ ಇದೆ -ಮಹಿಳಾ ಹಾಕಿ ತಂಡಕ್ಕೆ ಮೋದಿ ಶುಭಾಶಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತೀಯ ಹಾಕಿ ತಂಡದ ಮಹಿಳಾ ಆಟಗಾರರ ಜೊತೆ ವಿಡಿಯೋ ಕಾಲ್ ಶುಭ ಹಾರೈಸಿದರು. ಮೋದಿ ಅವರ ಮಾತುಗಳನ್ನ ಕೇಳಿ ಹಾಕಿ ತಂಡದ ಮಹಿಳಾ ಆಟಗಾರ್ತಿಯರು ಕಣ್ಣೀರು ಇಟ್ಟರು. ಈ ವೇಳೆ ಪ್ರಧಾನಿ ಮೋದಿ ಎಲ್ಲಾ ಆಟಗಾರರನ್ನ ಸಂತೈಸಿಸಿ , ಶುಭ ಹಾರೈಸಿ, ಸಮಾಧಾನ ಪಡಿಸಿದ ರೀತಿ ಎಲ್ಲರನ್ನೂ ಭಾವುಕತೆಗೆ ತಳ್ಳಿತು..

ಭಾರತ ಮಹಿಳಾ ಹಾಕಿ ತಂಡದ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಇಂದು ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಭಾರತ, ಗ್ರೇಟ್ ಬ್ರಿಟನ್ ವಿರುದ್ಧ 4-3 ಅಂತರದ ಗೋಲುಗಳಿಂದ ವೀರೋಚಿತ ಸೋಲು ಅನುಭವಿಸಿತು. ಆ ಮೂಲಕ ರಾಣಿ ರಾಮ್​ಪಾಲ್​​ ನೇತೃತ್ವದ ಭಾರತ ಹಾಕಿ ತಂಡ, ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಡುವುದರೊಂದಿಗೆ ಕಂಚಿನ ಪದಕ ಕೈತಪ್ಪುವಂತಾಗಿದೆ. ಇದರಿಂದ ನಮ್ಮ ಹೆಮ್ಮೆಯ ಆಟಗಾರರು ತುಂಬಾ ನೊಂದುಕೊಂಡಿದ್ದಾರೆ. ಪುರುಷರ ತಂಡದಂತೆ ತಾವೂ ಪದಕ ಗೆಲ್ಲುವ ಕನಸು ನನಸಾಗದಿರೋದಕ್ಕೆ ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ..

blank

ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಕರೆ ಮಾಡಿ ಧೈರ್ಯ ತುಂಬಿದರು.. ಮೋದಿ ಅವರ ಧ್ವನಿ ಕೇಳುತ್ತಿದ್ದಂತೆ ಆಟಗಾರ್ತಿಯರು ತುಂಬಾ ಭಾವುಕರಾಗಿ ಕಣ್ಣೀರು ಇಟ್ಟರು. ಈ ವೇಳೆ ದಯಮಾಡಿ ಅಳಬೇಡಿ. ಅಳೋದನ್ನ ನಿಲ್ಲಿಸಿ, ನಿಮ್ಮ ಬಗ್ಗೆ ಹೆಮ್ಮೆ ಇದೆ. ನೀವು ನಮ್ಮ ದೇಶದ ಕೋಟಿ ಕೋಟಿ ಜನರಿಗೆ ಸ್ಫೂರ್ತಿ ಅಂತಾ ಸಮಾಧಾನಪಡಿಸಿದ್ದಾರೆ.

ನಾವು ಈ ಬಾರಿಯ ಟೋಕಿಯೋ ಒಲಿಂಪಿಕ್​ನಲ್ಲಿ ಮರೆಯಲಾರದ ಪೈಪೋಟಿಯನ್ನ ನೀಡಿದ್ದೇವೆ. ಅವರು ಕೂಡ ಉತ್ತಮವಾಗಿಯೇ ಆಡಿದರು. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರು ಕೂಡ ಧೈರ್ಯ, ಕೌಶಲ್ಯದಿಂದ ಹೋರಾಡಿದ್ದಾರೆ. ಈ ಮಹೋನ್ನತ ತಂಡದ ಬಗ್ಗೆ ಭಾರತ ಹೆಮ್ಮೆಪಡುತ್ತದೆ.

Source: newsfirstlive.com Source link