ಪ್ರಶಾಂತ್ ಸಂಬರಗಿಯೊಳಗೆ ‘ವೈಲ್ಡ್ ಟೈಗರ್’ ಇದೆ- ದಿವ್ಯಾ ಉರುಡುಗ ಹೀಗಂದಿದ್ದೇಕೆ..?

ಪ್ರಶಾಂತ್ ಸಂಬರಗಿಯೊಳಗೆ ‘ವೈಲ್ಡ್ ಟೈಗರ್’ ಇದೆ- ದಿವ್ಯಾ ಉರುಡುಗ ಹೀಗಂದಿದ್ದೇಕೆ..?

ಮಜಾ ಅಂದ್ರೆ ದಿವ್ಯಾ ಅವರು ತಮ್ಮ ಪೋಟೋ ವಾಲ್​ ಬರುತ್ತೆ ಅಂತಾಫುಲ್​ ರೆಡಿಯಾಗಿದ್ರು. ದಿವ್ಯಾ ರೆಡಿಯಾಗಿ ಬರ್ತಿದ್ದಂತೆ ಲ್ಯಾಗ್ ಮಂಜು ಹಾಗೂ ವೈಷ್ಣವಿ ಏನಿವತ್ತು ಈ ರೀತಿ ರೆಡಿಯಾಗಿದಿಯಾ ಅಂತಾ ತಮಾಷೆ ಮಾಡಿದ್ರು.. ಆಗಾ ದಿವ್ಯಾ ನಾನು ದಿನಾ ಹೀಗೇ ರೆಡಿ ಆಗ್ತೀನಿ ಅಂತಾ ಹೇಳಿದ್ರು. ಬಳಿಕ ಮಂಜು.. ಇವತ್ತು ದಿವ್ಯಾ ಅವಳ ಫೋಟೋ ವಾಲ್​ ಬರುತ್ತೆ ಅಂತಾ ಇಷ್ಟು ರೆಡಿಯಾಗಿದ್ದಾಳೆ.. ಆದ್ರೆ ಪ್ರಶಾಂತ್​ ಅವರ ಫೋಟೋವಾಲ್​ ಬಂದ್ರೆ ದಿವ್ಯಾ ರೆಡಿಯಾಗಿದ್ದು ವೇಸ್ಟ್​ ಅಂತಾ ಕಾಲೆಳೆದು ನಗುತ್ತಾರೆ.. ಬಳಿಕ ಬ್ಲೈಡ್ಸ್​ ಓಪನ್​ ಆಗುತ್ತೆ.. ಆಗಾ ಮಂಜು ಹೇಳಿದಂತೆ ಪ್ರಶಾಂತ್​ ವಾಲ್​ ಇರತ್ತೆ.. ದಿವ್ಯಾನ ಎಲ್ಲರೂ ತಮಾಷೆ ಮಾಡ್ತಾರೆ..

ಇದಾದ ನಂತ್ರ ಪ್ರಶಾಂತ್​ ಸಂಬರಗಿ ಹಾಗೂ ಮನೆಯ ಉಳಿದ ಸ್ಪರ್ಧಿಗಳು ಫೋಟೋಸ್​ ನೋಡಿ ಹಳೆಯ ಘಟನೆಯನ್ನ ಮೆಲುಕು ಹಾಕುತ್ತಾರೆ.. ಬಳಿಕ ಪ್ರಶಾಂತ್​ ಸಂಬರಗಿ ಈ ಪೋಟೋಗಳನ್ನು ನೋಡಿ ಖುಷಿಯಾಯ್ತು.. ಈ ಟ್ರಾವಲ್​ನಲ್ಲಿ ನಾವು ನೀವು ನೋಡಿರುವಂತಹ ಖುಷಿ ಅಳು ಬೇಸರ ಎಲ್ಲವನ್ನೂ ಚಿತ್ರದ ರೂಪದಲ್ಲಿ ಕೊಟ್ಟಿದ್ದೀರಾ.. ಈ ಫೋಟೊಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು.. ಡ್ಯಾನ್ಸ್​ ಕಲಿತಿದ್ದು ಹಾಗೂ ಸುದೀಪ್ ಸರ್​ ಮಾಡಿದ ಪ್ರಾಂಕ್​ ಫೋಟೋ ಎನ್ನುತ್ತಾರೆ.

blank

ಇನ್ನು 115 ದಿನದ ಜರ್ನಿಯನ್ನ ನಾವು ಇನ್ನು ನಾಲ್ಕು ದಿನಗಳಲ್ಲಿ ಮುಗಿಸ್ತೀವಿ.. ಫಸ್ಟ್​ ಡೇಯಿಂದ ನಾನು ಯಾರ ಜೊತೆ ಬಾಂಡ್​ ಆಗಿದ್ದೆ ಈಗಲೂ ಕೂಡಾ ಅವರ ಜೊತೆನೇ ಇದ್ದೀನಿ..ಡೇ 1 ಟು ಡೇ 115 ತನಕ ಇದ್ದಾರೆ ಅದು ಖುಷಿಯಿದೆ.. ಮಂಜು ಜೊತೆ ನನ್ನ ಬಾಂಡ್​ ಚೆನ್ನಾಗಿತ್ತು.. ನಾನು ಫಸ್ಟ್​ ಹತ್ತು ದಿನಗಳು ಮಂಜುನ ಬಾಲ ಆಗಿದ್ದೆ. ಅವರ ಜೋಕ್ಸ್​ ಅರ್ಥ ಮಾಡಿಕೊಳ್ಳಲು ಕಷ್ಟ ಆಯ್ತು.. ನಂತ್ರ ಕೆಲವೊಂದಿಷ್ಟು ಜಗಳ, ಇದೀಗ ಮತ್ತೆ ಫ್ರೆಂಡ್ಸ್​ ಆಗಿದ್ದಿವಿ.. ನಾಲ್ಕು ಕಳಪೆ ಮೂರು ಅತ್ಯುತ್ತಮ ಹಾಗೂ ಒಂದು ಕಿಚ್ಚನ ಚಪ್ಪಾಳೆ ಇದು ನನ್ನ ಬಿಗ್​ಬಾಸ್​ ಸೀಸನ್​ ಎಂಟರ ಜರ್ನಿ ಅಂತಾ ಹೇಳ್ತಾರೆ..

ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಕಂಗೊಳಿಸುತ್ತಿದ್ದಾರೆ ಬಿಗ್​ಬಾಸ್​ ಬೆಡಗಿ ಪ್ರಿಯಾಂಕಾ

ಶಾಂತ್​ ಸಂಬರಗಿಯಲ್ಲಿ ಒಂದು ಮಗುವನ್ನು ಕಾಣ್ತೀನಿ..

ಪ್ರಶಾಂತ್​ ಸಂಬರಗಿ ಬಗ್ಗೆ ಅಭಿಪ್ರಾಯ ತಿಳಿಸಿದ ದಿವ್ಯಾ ಉರುಡುಗ.. ನಂದು ಹಾಗೂ ಪ್ರಶಾಂತ್​ ಸಂಬರಗಿದು ಒಂಥರಾ ಲವ್​ ಹೇಟ್​ ರಿಲೇಶನ್​ಶಿಪ್​.. ಜಗಳ ಮಾಡ್ತೀವಿ.. ಅಷ್ಟೇ ಬೇಗ ಸರಿಯಾಗ್ತೀವಿ ಕೂಡಾ.. ಪ್ರಶಾಂತ್​ ಸಂಬರಗಿಯಲ್ಲಿ ಒಂದು ಮಗುವನ್ನು ಕಾಣ್ತೀನಿ.. ಅದು ಬಿಟ್ರೆ ಒಂದು ವೈಲ್ಡ್​ ಟೈಗರ್​ ಕಾಣ್ತೀನಿ.. ಇದೆಲ್ಲವನ್ನೂ ಹೊರತುಪಡಿಸಿ ಅವರು ನನ್ನ ಅಣ್ಣ ಫಾರ್​ ಲೈಫ್​ ಅಂತಾರೆ..

blank

ನಿಮ್ಮ ಮೇಲೆ ಕೈಯೆತ್ತಿದ್ದು ನನಗೆ ಬೇಜಾರಿದೆ ಸಾರಿ..

ನಂತ್ರ ಮಾತನಾಡಿದ ವೈಷ್ಣವಿ.. ನಾನು ಹೊರಗಡೆ ನೋಡಿದ ಪ್ರಶಾಂತ್​ ಸರ್​ ಹಾಗೂ ಇಲ್ಲಿರುವ ಪ್ರಶಾಂತ್​ ಸರ್​ಗೂ ತುಂಬಾನೆ ವ್ಯತ್ಯಾಸ ಇದೆ.. ಒಂದು ಸ್ಪಿರಿಚ್ಯುವಲ್​ ಕನೆಕ್ಷನ್​ ಇದೆ, ಇನೋಸೆನ್ಸ್​ ಇದೆ..ಇದೆಲ್ಲಾ ತಿಳಿದುಕೊಂಡು ಖುಷಿಯಾಯ್ತು.. ಪ್ರತಿ ಬಾರಿಯೂ ನಾಮಿನೇಟ್​ ಆಗಿದ್ದೀರಾ.. ನಾಮಿನೇಟ್​ ಆದಾಗ ಇರುವ ಟೆನ್​ಷನ್​ ಹೇಗಿರತ್ತೆ ಅನ್ನೋದು ತಿಳಿಯತ್ತೆ.. ಆದ್ರೆ ಪ್ರತಿ ಸಲ ನೀವು ಸೇಫ್​ ಆಗಿ ಇಲ್ಲಿ ತನಕ ಬಂದಿದ್ದೀರಾ ಅಂದ್ರೆ ನಿಮಗೆ ಆ ಪೋಟೆನ್​ಶಿಯಲ್​ ಇದೆ ಅಂತಾ ಜನ ಸೇವ್​ ಮಾಡಿದ್ದಾರೆ ಅಂಥ ಅರ್ಥ.. ಇನ್ನೂ ಒಂದು ಟಾಸ್ಕ್​ನ ಹೀಟ್​ ಆಫ್​ ದ ಮೂಮೆಂಟ್​ನಲ್ಲಿ ನಾನು ನಿಮ್ಮ ಮೇಲೆ ಕೈಯೆತ್ತಿದ್ದು ನನಗೆ ಬೇಜಾರಿದೆ ಸಾರಿ ಅಂತಾ ಕೂಡಾ ಕೇಳ್ತಾರೆ..

ಇದನ್ನೂ ಓದಿ: ಮತ್ತೆ ಬರ್ತಿದೆ ಡಾನ್ಸ್​ ಡಾನ್ಸ್​ ಶೋ..ಲಾಂಚಿಂಗ್​ ಡೇಟ್​ ಫಿಕ್ಸ್.. ಜಡ್ಜಸ್​ ಯಾರು ಗೊತ್ತಾ?

blank

ಜಗಳ ಆಗಲಿ ಖುಷಿಯಾಗಲಿ ಎಲ್ಲವೂ ಮೆಮೊರಿನೇ..

ಮಂಜು ಕೂಡಾ ಪ್ರಶಾಂತ್​ ಅವರ ಬಗ್ಗೆ ಮಾತನಾಡಿದ್ದು, ನಂದು ಪ್ರಶಾಂತ್​ ಸಂಬರಿಗಿದೂ ಹಾವು ಮುಂಗುಸಿ ಸಂಬಂಧ.. ಈ ಸೀಸನ್​ ಅಂದ್ರೆ ಮೊದಲು ನಮ್ಮ ಇಬ್ಬರು ಹೆಸರು ಜಾಸ್ತಿ ಇರತ್ತೆ.. ಯಾಕಂದ್ರೆ ಅಷ್ಟು ಜಗಳ ಆಗಿದೆ.. ಇನ್ನನುಪ್ರಶಾಂತ್​ ಈ ಸೀಸನ್​ ನಲ್ಲಿ ಇಲ್ಲ ಅಂದಿದ್ರೂ ಬೇಜಾರಾಗ್ತಾ ಇತ್ತು.. ಜಗಳ ಆಗಲಿ ಖುಷಿಯಾಗಲಿ ಎಲ್ಲವೂ ಮೆಮೊರಿನೇ.. ಜಗಳ ಮಾಡಿದವರು ಕೆಟ್ಟವರಲ್ಲ.. ಒಳ್ಳೆ ಮಾತನಾಡಿದವರು ಒಳ್ಳೆಯವರು ಅಂತಾ ಹೇಳೋಕೆ ಆಗಲ್ಲಾ.. ಸಂದರ್ಭಕ್ಕೆ ತಕ್ಕಂತೆ ಹೀಗೆ ಆಗುತ್ತೆ.. ಈಗ ಎಲ್ಲಾ ಸರಿಯಾಗಿದೆ.. ಅಂತಾ ಹೇಳ್ತಾರೆ..

ಅರವಿಂದ್​ ಪ್ರಶಾಂತ್​ ಸಂಬರಗಿ ಬಗ್ಗೆ ಮಾತನಾಡಿದ್ದು.. ಸೀಸನ್​ ಶುರುವಿನಲ್ಲಿ ಸ್ವಲ್ಪ ಕ್ಲೋಸ್​ ಆದ ವ್ಯಕ್ತಿ ಅಂದ್ರೆ ಅದು ಪ್ರಶಾಂತ್​.. ನಂತ್ರ ಸಾಕಷ್ಟು ಖುಷಿ ಏಳು-ಬೀಳುಗಳು ಆದ್ವಿ.. ನನ್ನಿಂದ ಪರ್ಸನಲ್​ ಆಗಿ ನೋವಾಗಿದ್ರೆ ಸಾರಿ ಅಂತಾ ಮಾತನಾಡ್ತಾರೆ.

ಇದನ್ನೂ ಓದಿ: ಬಿಗ್‌ಬಾಸ್​: ಲ್ಯಾಗ್‌ ಮಂಜು ಕ್ಷಮೆ ಕೇಳಿ ಕಣ್ಣೀರಿಟ್ಟ ದಿವ್ಯಾ ಹೇಳಿದ್ದೇನು?

Source: newsfirstlive.com Source link