ವರುಣಾ ಜನತೆ ಜಾತಿ ನೋಡಿ ಮತ ನೀಡಲ್ಲ- ವಿಜಯೇಂದ್ರಗೆ ತಿರುಗೇಟು ನೀಡಿದ ಯತೀಂದ್ರ

ವರುಣಾ ಜನತೆ ಜಾತಿ ನೋಡಿ ಮತ ನೀಡಲ್ಲ- ವಿಜಯೇಂದ್ರಗೆ ತಿರುಗೇಟು ನೀಡಿದ ಯತೀಂದ್ರ

ಮೈಸೂರು: ವರುಣಾದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ದ ಯಾರೆ ಬಂದರೂ ಸ್ವಾಗತಿಸುತ್ತೇನೆ, ಯಾರು ಬೆಸ್ಟ್ ಎಂದು ಜನ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ವರುಣಾ ಜನತೆ ಜಾತಿ ನೋಡಿ ಮತ ನೀಡಲ್ಲ. ರಾಜಕಾರಣದಲ್ಲಿ ಜಾತಿಯಷ್ಟೇ ಮಾನದಂಡವಾಗಬಾರದು ಎಂದಿರುವ ಅವರು ವಿಜಯೇಂದ್ರ ಕಳೆದ ಬಾರಿಯೇ ವರುಣಾಗೆ ಬರ್ತಾರೆ ಅಂತಿದ್ರು. ತವರು ಜಿಲ್ಲೆ ಆಗಿರಲಿ ಅಥವಾ ಕರ್ಮಭೂಮಿ ಆಗಿರಲಿ ಯಾವುದೇ ಕ್ಷೇತ್ರಕ್ಕೆ ಯಾರೆ ನಿಂತರೂ ಕೊಡುಗೆ ಇರಬೇಕು. ಜನರಿಗಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಜಾತಿ ಬಗ್ಗೆ ಯತೀಂದ್ರ ಠಕ್ಕರ್

ಜಾತಿ ಆಧಾರದ ಮೇಲೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು ಎಷ್ಟು ಸರಿ. ಈ ಕುರಿತು ವಿಜಯೇಂದ್ರಗೆ ಟಿಕೆಟ್ ಕೊಟ್ಟರೆ ಎಷ್ಟರ ಮಟ್ಟಿಗೆ ಸರಿ ಅಂತ ಬಿಜೆಪಿಯವರು ತೀರ್ಮಾನ ಮಾಡಬೇಕು ಎಂದು ಠಕ್ಕರ್​ ನೀಡಿದ್ದಾರೆ. ಇನ್ನು ಸಿದ್ದರಾಮಯ್ಯ ಕುರುಬರಿಗೆ ಸಚಿವ ಸ್ಥಾನ ಕೊಡಲಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆತುರುಗೇಟು ನೀಡಿದ ಅವರು, ಕುರುಬರೇ ಸಿಎಂ ಆಗಿದ್ದಾಗ ಕುರುಬರಿಗೆ ಮಂತ್ರಿ ಸ್ಥಾನ ಕೊಡಬಾರದೆಂಬ ನಿಲುವಿಗೆ ಬಂದಿದ್ದು ನಿಜ. ಆದ್ರೆ ಇತರೆ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆಯನ್ನ ಕೊಟ್ಟಿದ್ವಿ‌. ಆದ್ರೆ ಬಿಜೆಪಿಯವರು ದಲಿತರು, ಹಿಂದುಳಿದವರಿಗೆ ಎಷ್ಟು ಸಚಿವ ಸ್ಥಾನ ಕೊಟ್ಟಿದ್ದಾರೆ ಅವರು ಆತ್ಮಸಾಕ್ಷಿಯಿಂದ ಹೇಳಲಿ ಎಂದಿದ್ದಾರೆ.

ಶಾಸಕ ಜಮೀರ್ ನಿವಾಸದ ಮೇಲೆ ಐಟಿ ದಾಳಿ ಕುರಿತು ಮಾತನಾಡಿ ಈ ದಾಳಿ ರಾಜಕೀಯ ಪ್ರೇರಿತವಾದದ್ದು, ಐಟಿ, ಇಡಿ, ಸಿಬಿಐಯನ್ನು ಬಿಜೆಪಿ ತನ್ನ ಅಂಗ ಸಂಸ್ಥೆಗಳನ್ನಾಗಿ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜಕೀಯ ಎದುರಾಳಿಗಳಿಗೆ ಬ್ಲಾಕ್‌‌ಮೇಲ್, ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Source: newsfirstlive.com Source link