ಒಲಿಂಪಿಕ್ಸ್​ ವಿಜೇತೆ ಗೋಲ್ಡನ್ ಹಾರ್ಟ್; ಟ್ರೇನಿಂಗ್​ ಹೋಗಲು ಸಹಾಯ ಮಾಡ್ತಿದ್ದ ಟ್ರಕ್​ ಡ್ರೈವರ್​ಗಳಿಗೆ ಸನ್ಮಾನ

ಒಲಿಂಪಿಕ್ಸ್​ ವಿಜೇತೆ ಗೋಲ್ಡನ್ ಹಾರ್ಟ್; ಟ್ರೇನಿಂಗ್​ ಹೋಗಲು ಸಹಾಯ ಮಾಡ್ತಿದ್ದ ಟ್ರಕ್​ ಡ್ರೈವರ್​ಗಳಿಗೆ ಸನ್ಮಾನ

ಇಂಫಾಲ: ಟೋಕಿಯೋ ಒಲಿಂಪಿಕ್ಸ್​ನ ಮೊದಲ ದಿನವೇ ವೇಯ್ಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದ ಮಿರಾಬಾಯಿ ಚಾನು ಇದೀಗ ದೇಶದ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗಂತ ಮಿರಾಬಾಯಿ ಚಾನು ಅವರ ಒಲಿಂಪಿಕ್ಸ್​ವರೆಗಿನ ಪಯಣ ಸುಲಭದ್ದಾಗಿರಲಿಲ್ಲ..

ಯಾಕಂದ್ರೆ ಮಿರಾಬಾಯಿ ಚಾನು ವಾಸವಿದ್ದ ಗ್ರಾಮದಿಂದ 25 ಕಿ. ಮೀ ದೂರದಲ್ಲಿದ್ದ ಇಂಫಾಲದ ಸ್ಪೋರ್ಟ್ಸ್ ಅಕಾಡೆಮಿಗೆ ಮಿರಾಬಾಯಿ ಚಾನು ಪ್ರತಿದಿನ ತೆರಳಬೇಕಾಗ್ತಿತ್ತು. ಆದ್ರೆ ಅಲ್ಲಿಗೆ ಸಾರಿಗೆ ಸಂಪರ್ಕ ಇರಲಿಲ್ಲ.. ಹೀಗಾಗಿ ಮಿರಾಬಾಯಿ ಚಾನು ರಸ್ತೆ ಮಧ್ಯೆ ಸಿಗುವ ಮರಳು ಲಾರಿಗಳನ್ನ ಹತ್ತಿ ಸ್ಪೋರ್ಟ್ಸ್ ಅಕಾಡೆಮಿಗೆ ತೆರಳಬೇಕಾಗ್ತಾ ಇತ್ತು. ಟ್ರಕ್​ನ ಡ್ರೈವರ್​ಗಳು ಮಿರಾಬಾಯಿ ಅವರಿಂದ ಹಣ ಪಡೆಯದೇ ಅವರನ್ನ ತಲುಪಬೇಕಾದ ಜಾಗಕ್ಕೆ ಕರೆದುಕೊಂಡು ಹೋಗ್ತಿದ್ರು.

blank

ಇದೀಗ ಒಲಿಂಪಿಕ್ಸ್​ನಲ್ಲಿ ಬೆಳ್ಳಿಗೆದ್ದು ಗ್ರಾಮಕ್ಕೆ ವಾಪಸ್ಸಾಗಿರುವ ಮಿರಾಬಾಯಿ ಚಾನು ಇದೀಗ ತನ್ನ ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿದ ಸುಮಾರು 150 ಟ್ರಕ್ ಡ್ರೈವರ್​ಗಳನ್ನು ಕರೆಸಿ ಅವರಿಗೆ ಸನ್ಮಾನ ಮಾಡುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.
150 ಟ್ರಕ್ ಡ್ರೈವರ್​ಗಳಿಗೆ ಮತ್ತು ಹೆಲ್ಪರ್​ಗಳಿಗೆ ತಲಾ ಒಂದೊಂದು ಶರ್ಟ್, ಮಣಿಪುರಿ ಸ್ಕಾರ್ಫ್ ಹಾಗೂ ಭೂರಿ ಭೋಜನ ಹಾಕಿಸುವ ಮೂಲಕ ಮಿರಾಬಾಯಿ ತಮ್ಮ ಋಣ ತೀರಿಸಿದ್ದಾರೆ. ಅಲ್ಲದೇ ಡ್ರೈವರ್​ಗಳನ್ನು ಭೇಟಿಯಾದ ಸಮಯದಲ್ಲಿ ಮಿರಾಬಾಯಿ ಭಾವುಕರಾಗಿದ್ದಾರೆ.

ನೀವು ಇಲ್ಲದೇ ವೇಯ್ಟ್ ಲಿಫ್ಟರ್ ಆಗುವ ನನ್ನ ಕನಸು ನನಸಾಗುತ್ತಿರಲಿಲ್ಲ ಎಂದು ಹೇಳುತ್ತಾ ಮಿರಾಬಾಯಿ ಗದ್ಗದಿತರಾಗಿದ್ದಾರೆ. ಅಲ್ಲದೇ ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಅವರು ಈ ಸ್ಥಾನಕ್ಕೆ ತಲುಪಲು ನಾನು ಸಾಕಷ್ಟು ತ್ಯಾಗ ಮಾಡಿದ್ದೇನೆ ಎಂದು ಹೇಳಿದ್ದಾರೆ.

Source: newsfirstlive.com Source link