‘ರಾಜೀವ್​ಗಾಂಧಿ ಖೇಲ್​ರತ್ನ’ಗೆ ಮರುನಾಮಕರಣ; ಪ್ರಧಾನಿ ಮೋದಿಗೆ ಇರ್ಫಾನ್ ಪಠಾಣ್ ಟಾಂಗ್

‘ರಾಜೀವ್​ಗಾಂಧಿ ಖೇಲ್​ರತ್ನ’ಗೆ ಮರುನಾಮಕರಣ; ಪ್ರಧಾನಿ ಮೋದಿಗೆ ಇರ್ಫಾನ್ ಪಠಾಣ್ ಟಾಂಗ್

ನವದೆಹಲಿ: ಕೇಂದ್ರ ಸರ್ಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುತ್ತಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್​ಚಂದ್​ ಖೇಲ್​ ರತ್ನ ಎಂದು ಮರುನಾಮಕರಣ ಮಾಡಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ನಡೆಗೆ ಪರ-ವಿರೋಧ ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ವಿಚಾರವಾಗಿ​ ಟ್ವಿಟರ್​ನಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಗೆ ಕಾಲೆಳೆದಿದ್ದಾರೆ.

ಈ ನಡೆಯನ್ನು ನಾನು ಖಂಡಿತ ಸ್ವಾಗತಿಸುತ್ತೇನೆ.. ಕ್ರೀಡಾಪಟುಗಳನ್ನು ಗುರುತಿಸುತ್ತಿರುವುದು ಮತ್ತು ಅವಾರ್ಡ್​​ಗಳಿಗೆ ಕ್ರೀಡಾಪಟುಗಳ ಹೆಸರನ್ನು ಸೇರಿಸಲಾಗುತ್ತದೆ. ಇಂಥ ಹಲವು ಸಾಧ್ಯತೆಗಳ ಪ್ರಾರಂಭವೇ ಧ್ಯಾನ್​​ಚಂದ್ ಅವಾರ್ಡ್.. ಭವಿಷ್ಯದಲ್ಲಿ ಕ್ರೀಡಾ ಸ್ಟೇಡಿಯಂಗಳಿಗೂ ಕೂಡ ಕ್ರೀಡಾಪಟುಗಳ ಹೆಸರಿನಲ್ಲಿ ಕರೆಯುವಂತಾಗಲಿ ಎಂದಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಗುಜರಾತ್​ನ ಅಹಮದಾಬಾದ್​​ನಲ್ಲ ಹೊಸದಾಗಿ ನವೀಕರಣಗೊಂಡ ವಿಶ್ವದ ಅತೀ ದೊಡ್ಡ ಮೊಟೆರಾ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯ್ತು. ರಾಷ್ಟ್ರಪತಿ ರಾಮ್​ನಾಥ ಕೋವಿಂದ ಈ ಸ್ಟೇಡಿಯಂನ ಉದ್ಘಾಟನೆ ಮಾಡಿದ್ದರು.

ಇದನ್ನೂ ಓದಿ: ಮೊಟೆರಾ ಮೈದಾನಕ್ಕೆ ‘ನರೇಂದ್ರ ಮೋದಿ ಸ್ಟೇಡಿಯಂ’ ಎಂದು ಮರುನಾಮಕರಣ, ರಾಷ್ಟ್ರಪತಿ​ಗಳಿಂದ ಉದ್ಘಾಟನೆ

ಇನ್ನು 2018 ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಲಖನೌದ ಎಕಾನ ಇಂಟರ್​ನ್ಯಾಷನಲ್ ಸ್ಟೇಡಿಯಂನ್ನು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿತ್ತು.

Source: newsfirstlive.com Source link