ಮಹಿಳೆಯರಿಗೆ ಬಳೆ ಕೊಡಿಸಿ ತಾವೇ ತೊಡಿಸಿದ ಡಾ.ಜಿ ಪರಮೇಶ್ವರ್

ಮಹಿಳೆಯರಿಗೆ ಬಳೆ ಕೊಡಿಸಿ ತಾವೇ ತೊಡಿಸಿದ ಡಾ.ಜಿ ಪರಮೇಶ್ವರ್

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್​ ಅವರು ನಿನ್ನೆ ತುಂಬಾ ಜಾಲಿ ಮೂಡ್​ನಲ್ಲಿದ್ದರು. ಫ್ರೀ ಟೈಂನಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ ಜಾತ್ರೆಗೆ ಬಂದಿದ್ದ ಪರಮೇಶ್ವರ್​, ತುಂಬಾ ಜೋಶ್​​ನಲ್ಲಿ ಇದ್ದರು.

blank

ಜಾತ್ರೆಗೆ ಏನೆಲ್ಲಾ ವಸ್ತುಗಳು ಬಂದಿವೆ ಅಂತಾ ವೀಕ್ಷಿಸಿದ ಪರಮೇಶ್ವರ್ ಕೊನೆಗೆ ಬಳೆಗಾರರ ಬಳಿ ಹೋಗಿದ್ದರು. ಇವೆಲ್ಲಾ ಯಾವ ಬಳೆ? ಹೇಗಿದೆ? ಒಂದಕ್ಕೆ ಎಷ್ಟು ಅಂತಾ ಬಳೆಗಾರ್ತಿಯರನ್ನ ಮಾತನಾಡಿದ ಪರಮೇಶ್ವರ್​.. ಕೊನೆಗೆ ಅಲ್ಲಿದ್ದ ಮಹಿಳೆಯರಿಗೆ ಬಳೆ ಕೊಡಿಸಲು ಮುಂದಾಗುತ್ತಾರೆ.

blank

ಅದರಂತೆ ಸಹೋದರನಂತೆ ಬಳೆ ಕೊಡಿಸುತ್ತಾರೆ. ಅಲ್ಲದೆ ಕೆಲವು ಮಹಿಳೆಯರಿಗೆ ಬಳೆಯನ್ನ ತೊಡಿಸಿದ್ರು. ಪರಮೇಶ್ವರ್ ಅವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಅವರು ಬಳೆ ತೊಡಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

blank

Source: newsfirstlive.com Source link