ತಾಲಿಬಾನಿಗಳ ಮತ್ತೊಂದು ಭೀಕರ ಕೃತ್ಯ; ಆಫ್ಘಾನ್ ಸರ್ಕಾರದ ಮಾಧ್ಯಮ ಮುಖ್ಯಸ್ಥನ ಹತ್ಯೆ

ತಾಲಿಬಾನಿಗಳ ಮತ್ತೊಂದು ಭೀಕರ ಕೃತ್ಯ; ಆಫ್ಘಾನ್ ಸರ್ಕಾರದ ಮಾಧ್ಯಮ ಮುಖ್ಯಸ್ಥನ ಹತ್ಯೆ

ಕಳೆದ ತಿಂಗಳು ಭಾರತದ ಪುಲಿಟ್ಜರ್ ವಿಜೇತ ಪತ್ರಕರ್ತ ದ್ಯಾನಿಶ್ ಸಿದ್ದಿಕಿಯವರನ್ನ ಹೀನಾಯವಾಗಿ ಹತ್ಯೆಗೈದಿದ್ದ ತಾಲಿಬಾನಿಗಳು ನಂತರ ಹಾಸ್ಯ ನಟನೊಬ್ಬನನ್ನೂ ಸಹ ಹೀನಾಯವಾಗಿ ಹತ್ಯೆಗೈಯ್ಯುವ ಮೂಲಕ ಕುಖ್ಯಾತಿಗೆ ಒಳಗಾಗಿದ್ದರು. ಇದೀಗ ಅಫ್ಘಾನಿಸ್ತಾನದಿಂದ ಮತ್ತೊಂದು ಭಯಂಕರ ಸುದ್ದಿ ಹೊರಬಿದ್ದಿದ್ದು ಅಲ್ಲಿನ ಸರ್ಕಾರಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥನನ್ನ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತೀಯ ಎಂದೇ ತಾಲಿಬಾನ್​​ನಿಂದ ಪತ್ರಕರ್ತ ದ್ಯಾನಿಶ್ ಸಿದ್ದಿಕಿ ಹತ್ಯೆ; ದೇಹಕ್ಕೆ 12 ಗುಂಡು, ಮುಖದ ಮೇಲೆ ಗಾಡಿ

ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ವಾಪಸ್ಸಾಗುತ್ತಿದ್ದಂತೆಯೇ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದೆ. ತಾಲಿಬಾನಿಗಳ ವಿರುದ್ಧ ಸುದ್ದಿ ಮಾಡುತ್ತಿದ್ದ ದ್ಯಾನಿಶ್ ಸಿದ್ದಿಕಿಯವರನ್ನ ಹತ್ಯೆಗೈದ ಬೆನ್ನಲ್ಲೇ ಇದೀಗ ಸರ್ಕಾರಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥನನ್ನ ಕೊಲೆ ಮಾಡುವ ಮೂಲಕ ಬೆಚ್ಚಿಬೀಳಿಸಿದೆ. ಇತ್ತೀಚೆಗೆ ತಾಲಿಬಾನ್ ಉಗ್ರರು ಸರ್ಕಾರದ ಹಿರಿಯ ಆಡಳಿತಾಧಿಕಾರಿಗಳನ್ನ ಗುರಿಯಾಗಿಸುವುದಾಗಿ ವಾರ್ನಿಂಗ್ ಮಾಡಿದ್ದರು.

ಇದನ್ನೂ ಓದಿ: ರಾಕೆಟ್​ ದಾಳಿ ಬೆನ್ನಲ್ಲೇ ಅಫ್ಘಾನಿಸ್ತಾನ್​​​ ಭದ್ರತಾ ಪಡೆಯಿಂದ ಏರ್​ಸ್ಟ್ರೈಕ್​ ; 254 ತಾಲಿಬಾನ್​​ ಉಗ್ರರು ಉಡೀಸ್

ಇದನ್ನೂ ಓದಿ: 350 ಕ್ಕೂ ಹೆಚ್ಚು ಪಾಕಿಸ್ತಾನಿ ತಾಲಿಬಾನ್ ಉಗ್ರರ ಹುಟ್ಟಡಗಿಸಿದ ಆಫ್ಘಾನಿಸ್ತಾನ

Source: newsfirstlive.com Source link