ಜಮೀರ್​ ಮನೆಯಲ್ಲಿ ಏನೇನೆಲ್ಲಾ ಸೀಜ್​ ಮಾಡಿದ್ದಾರೆ? ಯಾರೀ ಮಂಗಳೂರು ಮೂಲದ ವ್ಯಕ್ತಿ?

ಜಮೀರ್​ ಮನೆಯಲ್ಲಿ ಏನೇನೆಲ್ಲಾ ಸೀಜ್​ ಮಾಡಿದ್ದಾರೆ? ಯಾರೀ ಮಂಗಳೂರು ಮೂಲದ ವ್ಯಕ್ತಿ?

ಬೆಂಗಳೂರು: ಐಎಂಎ ವಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಕಾರಣ ಚಾಮರಾಜಪೇಟೆ​ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ED ಅಧಿಕಾರಿಗಳು ದಾಳಿ ನಡೆಸಿದ್ದರು. ಇಂದು ದಾಳಿ ಅಂತ್ಯಗೊಂಡಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಜಮೀರ್ ಮತ್ತು ಅವರ ಸಹೋದರರಿಗೆ ಸೇರಿದಂತೆ ಅನೇಕ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವದಾಗಿ ತಿಳಿಸಿದ್ದು, ಅವರ ಲ್ಯಾಪ್ ಟಾಪ್ & ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸಹ ಸೀಜ್ ಮಾಡಿದ್ದಾಗಿ  ನ್ಯೂಸ್​ಫಸ್ಟ್​ಗೆ ED ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

blank

ಮನೆಯಲ್ಲಿರುವ ಎಲ್ಲಾ ವಸ್ತುಗಳ ಆಡಿಟ್ ರಿಪೋರ್ಟ್ ಮಾಡಿಕೊಂಡಿರುವ ಅಧಿಕಾರಿಗಳು, ಜಮೀರ್​ ಸಹೋದರರ ಅಕೌಂಟ್ ಟ್ರಾನ್ಸಾಕ್ಷನ್ ಗಳ ಪ್ರಿಂಟ್ ಔಟ್ ತೆಗೆದುಕೊಳ್ಳಲಾಗಿದ್ದು, ಎಲ್ಲಾ ದಾಖಲೆಗಳಿಗೆ ಸಂಪೂರ್ಣ ಕುಟುಂಬದವರ ಸಹಿ ಪಡೆಯಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ ಇಡಿ ಶಾಕ್​ -ಮನೆ, ಕಚೇರಿ ಮೇಲೆ ಇಡಿ ದಾಳಿ

ದಾಳಿ ವೇಳೆ ಮಂಗಳೂರು ಮೂಲದ ವ್ಯಕ್ತಿಯ ಕೆಲ ದಾಖಲೆಗಳು ಲಭ್ಯವಾಗಿದ್ದು, ಆ ವ್ಯಕ್ತಿಯ ಜೊತೆ ಜಮೀರ್​ ತೀರಾ ಆಪ್ತರಾಗಿರುವ ಶಂಕೆ ಅಧಿಕಾರಿಗಳು ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಈ ವ್ಯಕ್ತಿಯು ಮಂಗಳೂರಿನಲ್ಲಿ ಕೆಲ ಖಾಸಗಿ ಹಡಗುಗಳನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದು, ಐಎಂಎ ಕಂಪನಿಯ 13 ನೇ ಆರೋಪಿಯ ಜೊತೆ ಲಿಂಕ್ ಸಹ ಹೊಂದಿದ್ದ ಎನ್ನಲಾಗಿದ್ದು, ಕಳೆದ 2 ವರ್ಷಗಳಿಂದ ಆ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎನ್ನಲಾಗ್ತಿದೆ. ಇನ್ನು ಈ ವ್ಯಕ್ತಿಯ ಮೂಲಕ ಜಮೀರ್​ ವಿದೇಶದಲ್ಲಿ ಹಣ ಹೂಡಿಕೆ ಮಾಡಿರುವ ಬಗ್ಗೆ ED ಅಧಿಕಾರಿಗಳಿಗೆ ಅನುಮಾನ ಮೂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ -ED ದಾಳಿಗೆ ಜಮೀರ್​ ಕಿಡಿ

Source: newsfirstlive.com Source link