BIG BREAKING: ಕೊನೆಗೂ ಮಣಿದ ಚೀನಾ; ಲಡಾಖ್​​ನ ಗೋಗ್ರಾದಿಂದ ಹಿಂದೆ ಸರಿದ ಡ್ರಾಗನ್

BIG BREAKING: ಕೊನೆಗೂ ಮಣಿದ ಚೀನಾ; ಲಡಾಖ್​​ನ ಗೋಗ್ರಾದಿಂದ ಹಿಂದೆ ಸರಿದ ಡ್ರಾಗನ್

ನವದೆಹಲಿ: ಲಡಾಖ್​​ನ ಗೋಗ್ರಾ ಪೋಸ್ಟ್​ನಲ್ಲಿ ಉಂಟಾಗಿದ್ದ ವಿಷಮ ಪರಿಸ್ಥಿತಿ ಸರಿಯಾಗುತ್ತಿದ್ದು, ಭಾರತ ಹಾಗೂ ಚೀನಾದ ಎರಡೂ ಸೇನೆಗಳು ಅಲ್ಲಿಂದ ಹಿಂದೆ ಸರಿದಿವೆ. ಅಗಸ್ಟ್​ 4-5 ಎರಡು ದಿನಗಳಲ್ಲಿ ಎರಡೂ ಸೇನೆಗಳು ಹಿಂದೆ ಸರಿದಿದ್ದು.. ಪರಿಸ್ಥಿತಿ ಮೊದಲಿದ್ದ ಹಂತಕ್ಕೆ ತಲುಪಿದಂತೆ ಆಗಿದೆ.

ಗಡಿಯಲ್ಲಿ ಎರಡು ದೇಶಗಳ ನಡುವೆ ಸಂಭವಿಸಿದ್ದ ಬಿಕ್ಕಟ್ಟನ್ನ ಶಮನ ಮಾಡಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಬರೋಬ್ಬರಿ 12 ಬಾರಿ ಸಭೆಗಳು ನಡೆದಿದ್ದವು. ಸದ್ಯ ಸಭೆಯಲ್ಲಿ ಮಾಡಿಕೊಂಡ ಒಪ್ಪಂದಂತೆ ಭಾರತ ಹಾಗೂ ಚೀನಾ ಗೋಗ್ರಾ ಗಡಿಯಿಂದ ಸಂಪೂರ್ಣ ಹಿಂದೆ ಸರಿದಿವೆ. ಇತ್ತೀಚೆಗೆ ನಡೆದಿದ್ದ ಕಮಾಂಡರ್ ಹಂತದ ಮಾತುಕತೆಯಲ್ಲಿ ಭಾರತ ಚೀನಾಕ್ಕೆ ಎಚ್ಚರಿಕೆಯನ್ನ ಕೂಡ ನೀಡಿತ್ತು. ನೀವು ಹಿಂದೆ ಸರಿಯದಿದ್ದರೆ ನಿಮ್ಮನ್ನು ನಾವು ಸುತ್ತುವರೆಯುತ್ತೇವೆ ಮತ್ತು ಕೈಲಾಶ್ ರೇಂಜ್ ಪರ್ವತವನ್ನು ಮರಳಿ ಆಕ್ರಮಿಸಿಕೊಳ್ಳುತ್ತೇವೆ ಎಂದು ಸಹ ಕಠಿಣವಾಗಿ ಹೇಳಿತ್ತು ಎನ್ನಲಾಗಿದೆ.

ಹಾಗೆ ನೋಡಿದ್ರೆ ಎರಡೂ ಸೇನೆಗಳ ನಡುವೆ ಅತ್ಯಂತ ದೊಡ್ಡ ಘರ್ಷಣೆಗೆ ಕಾರಣವಾಗ ಬಲ್ಲಂಥ ವಾತಾವರಣ ಗೋಗ್ರಾದಲ್ಲಿ ನಿರ್ಮಾಣವಾಗಿತ್ತು. ಚೀನಿ ಸೇನೆ ಇಲ್ಲಿ ಭಾಗಶಃ ಪರ್ಮನೆಂಟ್​​ ಟೆಂಟ್​​ಗಳನ್ನು ಸಹ ಹಾಕಿಕೊಂಡಿತ್ತು. ಜೊತೆಗೆ, ಆರ್ಟಿಲ್ಲರಿ ಗನ್​ಗಳನ್ನು ಸಹ ತಂದಿತ್ತು. ಇಲ್ಲಿಂದ ಸುತಾರಂ ಹಿಂದೆ ಸರಿಯಲ್ಲ ಅಂತ ಚೀನಾ ಕಳೆದ ಏಪ್ರಿಲ್​​ ತನಕ ಪಟ್ಟು ಹಿಡಿದಿತ್ತು. ಆದ್ರೆ ಕಳೆದ ಮೂರು ತಿಂಗಳಲ್ಲಿ ಭಾರತೀಯ ಆರ್ಮಿ ಅದೇನು ಮ್ಯಾಜಿಕ್ ಮಾಡಿತೋ ಗೊತ್ತಿಲ್ಲ.. ಈಗ ಚೀನಾ ಬಾಲ ಸುಟ್ಟ ಬೆಕ್ಕಿನಂತೆ ಹಿಂದೆ ಸರಿದಿರೋದು ಅಚ್ಚರಿಗೂ ಕಾರಣವಾಗಿದೆ.

 

Source: newsfirstlive.com Source link