ಜನಸಾಮಾನ್ಯರಿಗೆ ಡೋಂಟ್ ಕೇರ್; ರಾತ್ರೋರಾತ್ರಿ ರೆಡಿಯಾಯ್ತು CMಗಾಗಿ ಪ್ರತ್ಯೇಕ ರೋಡ್

ಜನಸಾಮಾನ್ಯರಿಗೆ ಡೋಂಟ್ ಕೇರ್; ರಾತ್ರೋರಾತ್ರಿ ರೆಡಿಯಾಯ್ತು CMಗಾಗಿ ಪ್ರತ್ಯೇಕ ರೋಡ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಸಂಚಾರಿ ಪೊಲೀಸರು ವಿಶೇಷ ಅನುಕೂಲ ಕಲ್ಪಿಸಿದ್ದಾರೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಆರ್‌.ಟಿ.ನಗರದ ನಿವಾಸದಿಂದ ಪ್ರತಿನಿತ್ಯ ಸಂಚಾರ ಮಾಡಲು ಬಸವರಾಜ ಬೊಮ್ಮಾಯಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅದೆನಂದರೆ ಮೇಖ್ರಿ ಸರ್ಕಲ್ ಬಳಿ ಇರುವ ಡಿವೈಡರ್ ಒಡೆದು ಸಿಎಂ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಬರಲು ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್‌ ಮಾರ್ಗವಾಗಿ ಬರುವ ಸಿಎಂಗೆ ಅವರಿಗೆ ಮೇಖ್ರಿ ಸರ್ಕಲ್ ಅಂಡರ್‌ಪಾಸ್ ಆದ ಬಳಿಕ ಹೊಸ ಮಾರ್ಗ ಕಲ್ಪಿಸಲಾಗಿದೆ.

ರಾತ್ರೋರಾತ್ರಿ ರೆಡಿಯಾಯ್ತು ಪ್ರತ್ಯೇಕ ಮಾರ್ಗ..!
ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಗೃಹ ಕೃಷ್ಣಾದಿಂದ ತಮ್ಮ ಖಾಸಗಿ ನಿವಾಸಕ್ಕೆ ಹೋಗಬೇಕು ಅಂದರೆ, ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್ ಅಂಡರ್‌ಪಾಸ್, ಗಂಗಾನಗರ ಅಂಡರ್‌ಪಾಸ್ ಹಾದು ಹೋಗಿ ಅಲ್ಲಿಂದ ಯೂಟರ್ನ್ ಮಾಡಿ, ಆರ್‌ಟಿನಗರ ಪ್ರವೇಶಿಸಬೇಕಿತ್ತು.

ಅದನ್ನು ಈಗ ಶಾರ್ಟ್ ಕಟ್ ಮಾಡಿ ಸಿಎಂ ಸಂಚಾರಕ್ಕಾಗಿಯೇ ಪ್ರತ್ಯೇಕ ಮಾರ್ಗವನ್ನ ಪೊಲೀಸರು ಕಲ್ಪಿಸಿದ್ದಾರೆ. ಈ ಪ್ರತ್ಯೇಕ ಮಾರ್ಗ ಮಾಡಿದ್ದರಿಂದ ಸಿಎಂ ಗೃಹ ಕಚೇರಿಗೂ, ಸಿಎಂ ಖಾಸಗಿ ನಿವಾಸಕ್ಕೂ ಇದ್ದ ಅಂತರದಲ್ಲಿ ಸುಮಾರು ಮೂಕ್ಕಾಲು ಕಿಮೀ ಕಡಿಮೆ ಆಗಲಿದೆ.

ಇನ್ನು ಬೆಂಗಳೂರಿನಿಂದ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನಿತ್ಯ ಲಕ್ಷಾಂತರ ವಾಹನಗಳ ಪ್ರಯಾಣ ಮಾಡುತ್ತಾರೆ. ಆದರೆ ಇದೇ ರಸ್ತೆಯಲ್ಲಿ ಪ್ರಯಾಣಿಸುವ ಸಿಎಂ ಬಸವರಾಜ ಬೊಮ್ಮಾಯಿಗೆ ಮಾತ್ರ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ.

Source: newsfirstlive.com Source link