ಡ್ರಗ್ಸ್​ ಕೇಸ್​ನಲ್ಲಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್​ ಕರಿಷ್ಮಾಗೆ ಬಂಧನದ ಭೀತಿ.?

ಡ್ರಗ್ಸ್​ ಕೇಸ್​ನಲ್ಲಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್​ ಕರಿಷ್ಮಾಗೆ ಬಂಧನದ ಭೀತಿ.?

ಮುಂಬೈ: ನಟಿ ದೀಪಿಕಾ ಪಡುಕೋಣೆ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರಿಗೆ ಬಂಧನದ ಭೀತಿ ಎದುರಾಗಿದೆ. ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರಗ್ಸ್ ಕೇಸ್​ನಲ್ಲಿ ಹಲವರ ಹೆಸರು ಕೇಳಿಬಂದಿತ್ತು. ಅದರಲ್ಲಿ ದೀಪಿಕಾ ಪಡುಕೋಣೆ ಅವರ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಹೆಸರೂ ಇದ್ದಿದ್ದರಿಂದ ಅವರಿಗೆ ಬಂಧನದ ಭೀತಿ ಎದುರಾಗಿದೆ.

ಇದರಿಂದ ತಪ್ಪಿಸಿಕೊಳ್ಳಲು ಕರಿಷ್ಮಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈಗ ಮುಂಬೈನ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಇದೀಗ ಅವರಿಗೆ ಬಂಧನದ ಭೀತಿ ಎದುರಾಗಿದೆ.ಕಳೆದ ಅಕ್ಟೋಬರ್​ನಲ್ಲಿ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಎನ್​ಡಿಪಿಎಸ್ ಕೋರ್ಟ್​ನಲ್ಲಿ ಕರಿಷ್ಮಾ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ನ್ಯಾಯಾಲಯ ಎನ್​ಸಿಬಿ ಮತ್ತು ಕರಿಷ್ಮಾ ಅವರ ವಾದ ಆಲಿಸಿ ಕರಿಷ್ಮಾರವರಿಗೆ ನಿರೀಕ್ಷಣಾ ಜಾಮೀನನ್ನ ನಿರಾಕರಿಸಿದೆ. ಅಲ್ಲದೇ, ಕರಿಷ್ಮಾರಿಗೆ ಆಗಸ್ಟ್ 25ರ ಒಳಗೆ ಬಾಂಬೆ ಹೈಕೋರ್ಟ್​ಗೂ ತಾವು ಮೇಲ್ಮನವಿ ಸಲ್ಲಿಸೋ ಅವಕಾಶವನ್ನ ವಿಶೇಷ ನ್ಯಾಯಮೂರ್ತಿ ವಿ.ವಿ.ವಿದ್ವಾನ್ ಅವರ ಪೀಠ ಆದೇಶ ನೀಡಿದೆ.

Source: newsfirstlive.com Source link