‘ಆ. 15 ರಂದು ತ್ರಿವರ್ಣ ಧ್ವಜ ಹಾರಿಸಲು ಬಿಡಲ್ಲ’ ಯೋಗಿಗೆ ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ ಬೆದರಿಕೆ

‘ಆ. 15 ರಂದು ತ್ರಿವರ್ಣ ಧ್ವಜ ಹಾರಿಸಲು ಬಿಡಲ್ಲ’ ಯೋಗಿಗೆ ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ ಬೆದರಿಕೆ

ಲಖನೌ: ಖಲಿಸ್ತಾನ್ ಪರ ಗುಂಪು ‘ಸಿಖ್ ಫಾರ್ ಜಸ್ಟೀಸ್’ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ತ್ರಿವರ್ಣ ಧ್ವಜ ಹಾರಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ.

ಅಂತಾರಾಷ್ಟ್ರೀಯ ಫೋನ್ ನಂಬರ್ ಒಂದರಿಂದ ಆಡಿಯೋ ಮೆಸೇಜ್ ಒಂದು ಉತ್ತರ ಪ್ರದೇಶ ಪೊಲೀಸರಿಗೆ ರವಾನೆಯಾಗಿದೆ. ಆ ಆಡಿಯೋದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸಬಾರದು.. ಅಲ್ಲದೇ ಅಂದು ಥರ್ಮಲ್ ಪ್ಲಾಂಟ್​ಗಳನ್ನು ಮುಚ್ಚಲಾಗುವುದು ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ ಫೋನ್ ನಂಬರ್ +6478079192 ನಿಂದ ಈ ಆಡಿಯೋ ರವಾನೆಯಾಗಿದೆ ಎನ್ನಲಾಗಿದೆ.

ಇನ್ನು ಉತ್ತರ ಪ್ರದೇಶ ಎಡಿಜಿ ಪ್ರಶಾಂತ್ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದು.. ಪೊಲೀಸರು ಆಡಿಯೋದ ಮೂಲ ಪತ್ತೆಹಚ್ಚಲು ಮುಂದಾಗಿದ್ದಾರೆ ಮತ್ತು ಆಡಿಯೋದ ದೃಢೀಕರಣ ನಡೆಸುತ್ತಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾನ್ ಥಾಕೂರ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೂ ಇಂಥದ್ದೇ ಬೆದರಿಕೆ ಬಂದಿತ್ತು.

Source: newsfirstlive.com Source link