ಮಿರಾಬಾಯಿ ಚಾನು ಶಸ್ತ್ರ ಚಿಕಿತ್ಸೆಗೆ ಪ್ರಧಾನಿ ವಿಶೇಷ ಕಾಳಜಿ; ಅಮೆರಿಕಾಕ್ಕೂ ಕಳಿಸಿದ್ದರಂತೆ ಮೋದಿ

ಮಿರಾಬಾಯಿ ಚಾನು ಶಸ್ತ್ರ ಚಿಕಿತ್ಸೆಗೆ ಪ್ರಧಾನಿ ವಿಶೇಷ ಕಾಳಜಿ; ಅಮೆರಿಕಾಕ್ಕೂ ಕಳಿಸಿದ್ದರಂತೆ ಮೋದಿ

ಮಣಿಪುರ: ವೇಯ್ಟ್ ಲಿಫ್ಟರ್ ಮಿರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಸಾಧನೆ ಮಾಡುವುದರ ಹಿಂದೆ ಪ್ರಧಾನಿ ಮೋದಿಯವರ ನೆರವಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಹೇಳಿಕೆ ನೀಡಿದ್ದಾರೆ. ಈ ಸಂಗತಿಯನ್ನು ಮಿರಾಬಾಯಿ ಚಾನು ಅವರೂ ಅನುಮೋದಿಸಿದ್ದು, ಪ್ರಧಾನಿ ಮೋದಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೆ ಅಂತಾ ಒಲಿಂಪಿಕ್ ಚಾಂಪಿಯನ್ ಹೇಳಿದ್ದಾರೆ.

blank

ಈ ಮೊದಲು ಮಾತನಾಡಿದ್ದ ಮಣಿಪುರ ಸಿಎಂ ಎನ್. ಬಿರೆನ್ ಸಿಂಗ್, ಮೀರಾಗೆ ಪ್ರಧಾನಿ ಮೋದಿ ಮಾಡಿರುವ ನೆರವಿನ ಬಗ್ಗೆ ತಿಳಿದು ನನಗೆ ಅಚ್ಚರಿಯಾಯಿತು. ಪ್ರಧಾನಿ ಮೋದಿ ಮಿರಾಬಾಯಿ ಅವರ ವೈದ್ಯಕೀಯ ಮತ್ತು ಟ್ರೈನಿಂಗ್​ ಅಗತ್ಯಗಳನ್ನ ಪೂರೈಸಿ ಚಾನು ಅವರನ್ನ ಯುಎಸ್​ಗೆ ಕಳುಹಿಸಿದ್ದರು ಎಂದು ಮಿರಾಬಾಯಿ ಸ್ವತಃ ನನಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಒಲಿಂಪಿಕ್ಸ್​ ವಿಜೇತೆ ಗೋಲ್ಡನ್ ಹಾರ್ಟ್; ಟ್ರೇನಿಂಗ್​ ಹೋಗಲು ಸಹಾಯ ಮಾಡ್ತಿದ್ದ ಟ್ರಕ್​ ಡ್ರೈವರ್​ಗಳಿಗೆ ಸನ್ಮಾನ

ಮಿರಾಬಾಯಿ ಚಾನು ಅವರಿಗೆ ಸ್ನಾಯು ಶಸ್ತ್ರಚಿಕಿತ್ಸೆ ಹಾಗೂ ಪ್ರಾಕ್ಟೀಸ್​ಗಾಗಿ ಯುಎಸ್​ಗೆ ಹೋಗಲು ಸಾಧ್ಯವಾಗಿರದಿದ್ದರೆ ಅವರಿಗೆ ಪದಕ ಗೆಲ್ಲುವುದು ಅಸಾಧ್ಯವಾಗುತ್ತಿತ್ತಂತೆ.. ಪ್ರಧಾನಿ ಮೋದಿ ಮಿರಾಬಾಯಿಗೆ ಸಹಾಯ ಮಾಡಿದ್ದು ತಿಳಿದು ಮಣಿಪುರದ ಜನರು ಹರ್ಷಗೊಂಡಿದ್ದಾರೆ.

ಪ್ರಧಾನಿ ಮೋದಿ ಸಹಾಯ ಅಪಾರ

ಮಿರಾಬಾಯಿ ಚಾನುಗೆ ಬೆನ್ನು ನೋವಿರುವುದು ಪ್ರಧಾನಿ ಮೋದಿಗೆ ತಿಳಿಯುತ್ತಿದ್ದಂತೆ ಮಧ್ಯೆ ಪ್ರವೇಶಿಸಿ ಕೇಂದ್ರದ ಮೂಲಕ ಖರ್ಚು ವೆಚ್ಚಗಳನ್ನ ಭರಿಸಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ಮಿರಾಬಾಯಿ ಚಾನು ಮಾತ್ರವಲ್ಲದೇ ಮತ್ತೊಬ್ಬರಿಗೂ ಸಹ ನೆರವು ನೀಡಿ ಅವರನ್ನ ವೈದ್ಯಕೀಯ ಪರಿಶೀಲನೆ ಮತ್ತು ಟ್ರೈನಿಂಗ್​ಗಾಗಿ ಯುಎಸ್​ಗೆ ಕಳುಹಿಸಿದ್ದಾರೆ ಎಂದು ಬಿರೆನ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿನಿಮಾ ಆಗಲಿದೆ ಬೆಳ್ಳಿಪದಕ ವಿಜೇತೆ ಮಿರಾಬಾಯಿ ಚಾನು ಬದುಕಿನ ಕಥೆ

ಇನ್ನು ಈ ಬಗ್ಗೆ ಮೀರಾಬಾಯಿ ಚಾನು ಕೂಡ ಮಾಹಿತಿ ನೀಡಿದ್ದು, ನನಗೆ ಗಾಯವಾದಾಗ ಮತ್ತು ನನ್ನ ಟ್ರೇನಿಂಗ್​​ಗಾಗಿ ಪ್ರಧಾನಿ ಮೋದಿ ಸಾಕಷ್ಟು ಸಹಾಯ ಮಾಡಿದ್ದು ಸತ್ಯ. ಅವರು ನನ್ನ ಫ್ಲೈಟ್ ಟಿಕೆಟ್ ಅರೆಂಜ್ ಮಾಡಿದ್ರು ಮತ್ತು ಮೆಡಿಕಲ್ ಟ್ರೀಟ್​ಮೆಂಟ್​​ಗಾಗಿ ಅಮೆರಿಕಾಕ್ಕೆ ಕಳಿಸಿಕೊಟ್ಟಿದ್ದರು. ಒಲಿಂಪಿಕ್​​ ತಯಾರಿಗಾಗಿ ಅವರು ನನಗೆ ಸಾಕಷ್ಟು ಟ್ರೇನಿಂಗ್​ ಪಡೆಯಲು ಬೆಂಬಲ ನೀಡಿದ್ರು ಅಂತಾ ಹೇಳಿದ್ದಾರೆ.

Source: newsfirstlive.com Source link