‘ಕಾಂತಾರ‘ದಲ್ಲಿ ಕಂಬಳ ಮತ್ತು ಭೂತಾರಾಧನೆ ಕತೆ ಹೇಳ್ತಾರಾ ರಿಷಬ್..?!

‘ಕಾಂತಾರ‘ದಲ್ಲಿ ಕಂಬಳ ಮತ್ತು ಭೂತಾರಾಧನೆ ಕತೆ ಹೇಳ್ತಾರಾ ರಿಷಬ್..?!

ಹೊಂಬಾಳೆ ಫಿಲಂಸ್​​ನಲ್ಲಿ ರಿಷಬ್ ಶೆಟ್ಟಿ ಸೇರಿದ್ದಾರೆ.. ಇವತ್ತು ಸಿನಿಮಾದ ಟೈಟಲ್ ಲಾಂಚ್ ಮಾಡಲಿದ್ದಾರೆ ಅಂತ ನಾವು ನಿಮ್ಗೆ ಕಳೆದ ಸಂಚಿಕೆಯಲ್ಲಿ ಹೇಳಿದ್ವಿ.. ಈಗ ಅದರ ಮುಂದುವರೆದ ಭಾಗ.. ಹೊಂಬಾಳೆ ಬ್ಯಾನರ್​ನಲ್ಲಿ ಕಂಬಳದ ಕಥೆಯನ್ನ ಹೇಳಲು ಹೊರಟ್ಟಿದ್ದಾರೆ ಕುಂದಾಪುರ ಶೆಟ್ರು.. ಈ ಬಗ್ಗೆ ಇನಷ್ಟು ಇಂಟ್ರಸ್ಟಿಂಗ್ ಮಾಹಿತಿ ಇದೋ ನಿಮಗಾಗಿ..

blank

ಕಾಂತಾರ , ಒಂದು ದಂತಕಥೆ… ಇದು ಸ್ಯಾಂಡಲ್​ವುಡ್​​ನ ನಯಾ ಮಲ್ಟಿಟ್ಯಾಲೆಂಟೆಡ್ ರಿಷಬ್ ಶೆಟ್ಟಿ ಕಲ್ಪನೆಯ ಹೊಸ ಸಿನಿಮಾ.. ಈ ಕೊರೊನಾ ಕಾಲದಲ್ಲೂ ಹೊಸ್ ಹೊಸ ಪ್ರತಿಭೆಗಳಿಗೆ ಸಾಲು ಸಾಲು ಬಂಗಾರದ ಅವಕಾಶ ಕೊಡ್ತಿರೋ ಹೊಂಬಾಳೆ ಫಿಲಂಸ್ ಈ ಬಾರಿ ರಿಷಬ್ ಶೆಟ್ಟಿ ಅವರ ಕಲ್ಪನೆಗೆ ಸಹಕಾರವಾಗುತ್ತಿದೆ..

ಹೊಂಬಾಳೆ ಫಿಲಂಸ್​ 11ನೇ ಸಿನಿಮಾವನ್ನ ಶುಕ್ರವಾರ ಹನ್ನೊಂದು ಗಂಟೆ 43 ನಿಮಿಷಕ್ಕೆ ಲಾಂಚ್ ಮಾಡುತ್ತೆ ಎಂದು ಅನೌನ್ಸ್ ಮಾಡಿದಾಗಲೇ ನಾವು ನಿಮಗೆ ಹೇಳಿದ್ವಿ ರಿಷಬ್ ಶೆಟ್ಟಿ ಜೊತೆ ಹೊಂಬಾಳೆ ಹನ್ನೊಂದನೇ ಸಿನಮಾ ಮಾಡಲಿದೆ ಅಂತ.. ಆ ಮಾತು ಈಗ ನಿಜವಾಗಿದೆ.. ಹಾಗಾದ್ರೆ ಹೊಂಬಾಳೆ ಜೊತೆ ರಿಷಬ್ ಶೆಟ್ಟಿ ಮಾಡ್ತಿರೋ ಹೊಸ ಸಿನಿಮಾ ಕಾಂತಾರ ಚಿತ್ರದ ಕಥೆಯ ಗುಟ್ಟೇನು , ಸ್ಪೆಷಾಲಿಟಿ ಏನು ಅನ್ನೋದನ್ನ ಹೇಳ್ತಿವಿ ಕೇಳಿ..

blank

ಇದನ್ನೂ ಓದಿ: ನಿನ್ನೆನೇ ಹೇಳಿದ್ವಿ..! ಕಂಬಳದ ಉಸೇನ್ ಬೋಲ್ಟ್​ ಆಗ್ತಿದ್ದಾರೆ ರಿಷಬ್ ಶೆಟ್ಟಿ.

ಕಂಬಳದ ಗದ್ದೆಯಲ್ಲಿ ಕೋಣಗಳ ನೊಗವನ್ನ ಹಿಡಿದು ಓಟವನ್ನ ಮಾಡ್ತಿರೋ ಪಾತ್ರದಾರಿ.. ಆ ಕಂಬಳದ ಓಟದ ಮೇಲೆ ಭೂತಾ.. ಇದು ಮೇಲ್ನೋಟಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಮಾಡಲು ಹೊರಟ್ಟಿರೋ ಕಾಂತಾರ ಸಿನಿಮಾದ ಪೋಸ್ಟರ್​​ನಲ್ಲಿ ಕಂಡು ಬರೋ ಕುತೂಹಲದ ನೋಟ..

ಕರಾವಳಿ ಸಿಮೇಯ ಪ್ರತಿಭೆಯಾಗಿರೋ ರಿಷಬ್ ಈ ಬಾರಿ ಕರಾವಳಿಯಲ್ಲಿ ಕಂಡು ಬರೋ ಕಂಬಳ ಕ್ರೀಡೆಯ ಕಥೆಯನ್ನ ಹೇಳಲು, ಅದರೋಳೆಗೆ ಭೂತಾರಾಧನೆಯ ಆಟಪಾಠವನ್ನ ತೋರಿಸಲು ಹೊರಟಂತೆ ಕಾಣುತ್ತಿದೆ.. ಈಗಾಗಲೇ ಲೋಕೇಶನ್​ ಹಂಟಿಂಗ್​​​ನಲ್ಲಿರೋ ರಿಷಬ್ ಶೆಟ್ಟಿ ಗ್ಯಾಂಗ್ ಆಗಸ್ಟ್ 27ನೇ ತಾರೀಖ್​​ನಿಂದ ಕಾಂತಾರ ಸಿನಿಮಾದ ಶೂಟಿಂಗ್​​ ಶುರು ಮಾಡಲಿದ್ದಾರೆ.. ಇನ್ನು ಹೀರೋಯಿನ್ ಯಾರು ಇನ್ಯಾಱರು ಈ ಸಿನಿಮಾದಲ್ಲಿ ಇರ್ತಾರೆ ಇತ್ಯಾದಿ ವಿಚಾರಗಳು ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ.

Source: newsfirstlive.com Source link