BBMP ಚುನಾವಣೆ ಬಳಿಕ ಸಂಪುಟ ಪುನಾರಚನೆ..ಬೆಂಗಳೂರಿನ ಕೆಲವು ಹಿರಿಯ ಸಚಿವರಿಗೆ ಕೊಕ್..?!

BBMP ಚುನಾವಣೆ ಬಳಿಕ ಸಂಪುಟ ಪುನಾರಚನೆ..ಬೆಂಗಳೂರಿನ ಕೆಲವು ಹಿರಿಯ ಸಚಿವರಿಗೆ ಕೊಕ್..?!

ಬೆಂಗಳೂರು: ಸದ್ಯದಲ್ಲೇ ಎದುರಾಗಲಿರುವ ಬಿಬಿಎಂಪಿ ಚುನಾವಣೆ ಬಳಿಕ ಮತ್ತೆ ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಈ ವೇಳೆ ಸಂಪುಟದಿಂದ ಬೆಂಗಳೂರಿನ ಕೆಲವು ಹಿರಿಯ ಸಚಿವರಿಗೆ ಕೋಕ್​​ ನೀಡಬಹುದು ಎನ್ನಲಾಗುತ್ತಿದೆ. 2023ರ ಚುನಾವಣೆ ಗಮನದಲ್ಲಿಟ್ಟು ಮತ್ತೆ ಸಂಪುಟ ಪುನಾರಚನೆ ಮಾಡಲಿದ್ದು, 7 ಸಚಿವ ಸ್ಥಾನಗಳ ಪೈಕಿ ಕೆಲವು ಹಿರಿಯ ಸಚಿವರನ್ನು ಕೈ ಬಿಡಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ರಚನೆಯಾದ ಸಿಎಂ ಬಸವರಾಜ್​​ ಬೊಮ್ಮಾಯಿ ಸರ್ಕಾರಕ್ಕೆ ಮುಂದಿನ ಬಿಬಿಎಂಪಿ ಚುನಾವಣೆ ತಲೆನೋವಾಗಿ ಪರಿಣಮಿಸಿದೆ. ಸದ್ಯದಲ್ಲೇ ಬಿಬಿಎಂಪಿ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಬಿಬಿಎಂಪಿ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆಯಾಗುವ ವೇಳೆ ಬೆಂಗಳೂರಿಗೆ ಪ್ರಾತಿನಿಧ್ಯತೆ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.

ಸದ್ಯ ಬೆಂಗಳೂರಿನ ಏಳು ಪ್ರಮುಖ ನಾಯಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಮುಂದೆ 2023ರ ವಿಧಾನಸಭಾ ಚುನಾವಣಾ ದೃಷ್ಟಿಯಲ್ಲಿ ಕೆಲವು ಬದಲಾವಣೆಗಳು ಮಾಡಬಹುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ; ED ದಾಳಿ ಬಳಿಕ ಜಮೀರ್​​ ಹೀಗಂದಿದ್ಯಾಕೇ?

ಬೊಮ್ಮಾಯಿ ಸಂಪುಟದಲ್ಲಿ ಬೆಂಗಳೂರು ನಗರದಿಂದ ಒಟ್ಟು 7 ಶಾಸಕರು ಸಚಿವರಾಗಿದ್ದಾರೆ. ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಎಸ್‌ಟಿ ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ, ಕೆ.ಗೋಪಾಲಯ್ಯ ಹಾಗೂ ವಿ ಸೋಮಣ್ಣ ನೂತನ ಮಂತ್ರಿಗಳಾಗಿ ಸಂಪುಟ ಸೇರಿದ್ದಾರೆ. ಇನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಡಾ.ಕೆ.ಸುಧಾಕರ್‌ ಸಚಿವರಾಗಿದ್ದಾರೆ.

Source: newsfirstlive.com Source link