ಮೂರನೇ ಅಲೆಗೆ ತಯಾರಿ; ಮಕ್ಕಳಿಗಾಗಿಯೇ ತಯಾರಾಗಿದೆ ವಿಶೇಷ ಕೇರ್​ ಸೆಂಟರ್​..

ಮೂರನೇ ಅಲೆಗೆ ತಯಾರಿ; ಮಕ್ಕಳಿಗಾಗಿಯೇ ತಯಾರಾಗಿದೆ ವಿಶೇಷ ಕೇರ್​ ಸೆಂಟರ್​..

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇನ್ನೂ ಸರಿಯಾಗಿ ನಿಯಂತ್ರಣಕ್ಕೆ ಬಂದಿಲ್ಲ. ಎರಡನೇ ಅಲೆ ಮುಗಿದು ಜನ ನಿರಾಳರಾಗುತ್ತಿದ್ದಂತೆ ಮತ್ತೆ ಕೊರೊನಾ ಹೆಮ್ಮಾರಿ ಮೂರನೇ ಅವತಾರ ಎತ್ತುವ ಸುದ್ದಿ ರಾಜ್ಯದ ಜನರನ್ನ ಆತಂಕಕ್ಕೀಡು ಮಾಡಿದೆ.
ಇನ್ನು ಮೂರನೇ ಅಲೆ ಮಕ್ಕಳಿಗೆ ಡೇಂಜರ್ ಎಂಬ ತಜ್ಞರ ವರದಿ ಹಿನ್ನೆಲೆ ಬೆಂಗಳೂರಿನಲ್ಲಿ ಮಕ್ಕಳಿಗಾಗಿಯೇ ವಿಶೇಷವಾದ ಕೋವಿಡ್ ಕೇರ್ ಸೆಂಟರ್​ನ್ನು ತೆರೆಯಲಾಗಿದೆ.

blank

ಹೌದು ಮೂರನೇ  ಅಲೆ ಮಕ್ಕಳಿಗೆ ಡೇಂಜರ್​ ಎಂಬ ತಜ್ಞರ ವರದಿ ಬೆನ್ನಲ್ಲೇ ಬಿಬಿಎಂಪಿ ಈಗಾಲೇ ಮಕ್ಕಳಿಗೆ ಸರ್ಕಾರಿ, ಖಾಸಗೀ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆ ಮಾಡುತ್ತಿದ್ದು, ಅದರ ಜೊತೆ ಕೋವಿಡ್ ಕೇರ್ ಸೆಂಟರ್ ಕೂಡ ಓಪನ್ ಮಾಡಿ ಮಕ್ಕಳ ಜೊತೆ ಪೋಷಕರು ಇರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್ ಹೇಳಿದ್ದಾರೆ.

blank

ಈಗಾಗಲೇ ಪದ್ಮನಾಭನಗರದಲ್ಲಿ 30 ಬೆಡ್ ಸಾಮರ್ಥ್ಯದ ಮಕ್ಕಳ‌ ಕೋವಿಡ್ ಕೇರ್ ಸೆಂಟರ್ ಬಹುತೇಕ ರೆಡಿಯಾಗಿದ್ದು, ಇದೇ ಮಾದರಿಯಲ್ಲಿ ಬಿಬಿಎಂಪಿಯ ಪ್ರತಿ ಝೋನ್ ನಲ್ಲಿ ಒಂದು ಚಿಲ್ಡ್ರನ್ಸ್​ ಕೇರ್ ಸೆಂಟರ್​​ ತೆರೆಯುವದಾಗಿ ಹೇಳಿದ್ದು, ಇನ್ಮುಂದೆ ಮಕ್ಕಳಲ್ಲಿ ಸೋಂಕು ಹೆಚ್ಚಳವಾಗೋದು ಕಂಡುಬಂದ್ರೆ ವಲಯವಾರು ಮಕ್ಕಳಿಗೆ ಚಿಲ್ಡ್ರನ್ಸ್​ ಕೇರ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ತೇವೆ ಎಂದಿದ್ದಾರೆ.

blank

ಇನ್ನು ಕ್ಲಸ್ಟರ್ ಕೇಸ್​ಗಳ ಹೆಚ್ಚಳ ಮತ್ತು ಹೊರರಾಜ್ಯದಿಂದ ಬರೋ ಪ್ರಯಾಣಿಕರೇ ಬಿಬಿಎಂಪಿಗೆ ತೆಲೆನೋವಾಗಿ ಪರಿಣಮಿಸಿದ್ದು, ಬೆಂಗಳೂರಿನಲ್ಲಿ ಮತ್ತೆ ಕ್ಲಸ್ಟರ್​ ಕೇಸ್​ಗಳ ಆತಂಕ ಶುರುವಾಗಿದೆ.

blank

ಬೆಂಗಳೂರಿಗೆ ಶುರುವಾಯ್ತ ಮತ್ತೆ ಕ್ಲಸ್ಟರ್ ಕೇಸ್​ ಆತಂಕ..!
ಕ್ಲಸ್ಟರ್​ಗೆ ಬೆಂಗಳೂರಿನ ಅಪಾರ್ಟ್​​ಮೆಂಟ್​​ಗಳೇ ಹೆಚ್ಚು ಟಾರ್ಗೆಟ್..!

ನಿನ್ನೆವರೆಗೆ ನಗರದಲ್ಲಿ 155 ಕ್ಲಸ್ಟರ್ ಕೇಸ್ ಗಳ ಕಂಟೈನ್ಮೆಂಟ್ ಝೋನ್ ಗಳು ರಚನೆಯಾಗಿವೆ. 78 ಅಪಾರ್ಟ್ಮೆಂಟ್ ಗಳಲ್ಲಿ ಕ್ಲಸ್ಟರ್ಸ್ ಕೇಸ್​ಗಳ ಕಂಡು ಬಂದಿದ್ರೆ, 70 ಪ್ರತ್ಯೇಕ ಮನೆಗಳಲ್ಲಿ ಹಾಗೂ ಮೂರ್ನಾಲ್ಕು ಹಾಸ್ಟೆಲ್ ಗಳಲ್ಲಿ ಕ್ಲಸ್ಟ್​​ರ್​ ಕೇಸ್​ ಕಂಡು ಕಂಡುಬಂದಿದೆ.

ಸಿಎಂ ಸಭೆ ಬಳಿಕ ಬಿಬಿಎಂಪಿ ಯಾವೆಲ್ಲಾ ಕಠಿಣ ನಿರ್ಬಂಧಗಳಿಗೆ ಮುದಾಗ್ತಿದೆ ಅನ್ನೋದನ್ನಾ ನೋಡೋದಾದ್ರೆ…

  •  ಹೊರರಾಜ್ಯದಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು.
  • ಕೇರಳ ಮಹಾರಾಷ್ಟ್ರದ ಪ್ರತಿಯೊಬ್ಬ ಪ್ರಯಾಣಿಕರ ಕ್ವಾರಂಟೈನ್​​​..
  • ಕ್ವಾರಂಟೈನ್​ ಮಾಡಲು ಬಿಬಿಎಂಪಿ ಹಾಗೂ ಖಾಸಗೀ ಹೋಟೆಲ್​ಗಳ ವ್ಯವಸ್ಥೆ.
  • ಪ್ರಯಾಣಿಕರಲ್ಲಿ ಸೋಂಕು ಕಂಡುಬಂದ್ರೆ ಸಿಸಿಸಿಗೆ ಶಿಫ್ಟ್​.
  • ಅಪಾರ್ಟ್​​ಮೆಂಟ್​ಗಳಲ್ಲಿ ಕ್ಲಸ್ಟರ್​ ಝೋನ್​ಗಳನ್ನ ಗುರುತಿಸಿ ಕಂಟೈನ್ಮೆಂಟ್​ ಝೋನ್​ ಘೋಷಣೆ.
  • ಕೋವಿಡ್ ಕೇರ್ ಸೆಂಟರ್‌ & ಟ್ರಯಾಜಿಂಗ್ ಸೆಂಟರ್ ಗಳ‌ ಹೆಚ್ಚಳ.
  • ವಿಧಾನಸಭಾ ಕ್ಷೇತ್ರಕ್ಕೆ ಒಂದು ಟ್ರಯಾಜಿಂಗ್ ಸೆಂಟರ್ ಓಪನ್​.
  • ಡೆಲ್ಟಾ ಕೇಸ್​ ಸಂಪರ್ಕಿತರಿಗೆ ಕಡ್ಡಾಯ ಜಿನೋಮ್​​ ಸೀಕ್ವೆನ್ಸಿಂಗ್​​ ಟೆಸ್ಟ್.
  • ಮಕ್ಕಳಿಗಾಗಿ ಪ್ರತಿ ವಲಯದಲ್ಲಿ ಪ್ರತ್ಯೇಕ ಕೋವಿಡ್​ ಕೇರ್​ ಸೆಂಟರ್​.

ಒಟ್ನಲ್ಲಿ ಬೆಂಗಳೂರಿನಾದ್ಯಂತ ಮತ್ತೆ ಸೋಂಕು ಹೆಚ್ಚಳವಾಗ್ತಿದ್ದು, ಮೂರನೇ ಅಲೆಯ ಮುನ್ಸೂಚನೆ ಸಿಕ್ಕಿದೆ. ಇದನ್ನ ಗಂಭೀರವಾಗಿ ಪರಿಗಣಿಸಿರೊ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿನ ಪ್ರತಿಯೊಂದು ನಿರ್ಬಂಧಗಳನ್ನ ಹಂತಹಂತವಾಗಿ ಜಾರಿ ಮಾಡ್ತಿದೆ…

Source: newsfirstlive.com Source link