#CopleteDetails ಲಡಾಖ್​ನಲ್ಲಿ ಭಾರೀ ಬದಲಾವಣೆ; ಕೊನೆಗೂ ಮಂಡಿಯೂರಿದ ಚೀನಾ

#CopleteDetails ಲಡಾಖ್​ನಲ್ಲಿ ಭಾರೀ ಬದಲಾವಣೆ; ಕೊನೆಗೂ ಮಂಡಿಯೂರಿದ ಚೀನಾ

ನವದೆಹಲಿ: ಲಡಾಖ್​​ನ ಗೋಗ್ರಾ ಪೋಸ್ಟ್​ನಲ್ಲಿ ಉಂಟಾಗಿದ್ದ ವಿಷಮ ಪರಿಸ್ಥಿತಿ ಸರಿಯಾಗುತ್ತಿದ್ದು, ಭಾರತ ಹಾಗೂ ಚೀನಾದ ಎರಡೂ ಸೇನೆಗಳು ಅಲ್ಲಿಂದ ಹಿಂದೆ ಸರಿದಿವೆ. ಅಗಸ್ಟ್​ 4-5 ಎರಡು ದಿನಗಳಲ್ಲಿ ಎರಡೂ ಸೇನೆಗಳು ಹಿಂದೆ ಸರಿದಿದ್ದು.. ಪರಿಸ್ಥಿತಿ ಮೊದಲಿದ್ದ ಹಂತಕ್ಕೆ ತಲುಪಿದಂತೆ ಆಗಿದೆ.

ಗಡಿಯಲ್ಲಿ ಎರಡು ದೇಶಗಳ ನಡುವೆ ಸಂಭವಿಸಿದ್ದ ಬಿಕ್ಕಟ್ಟನ್ನ ಶಮನ ಮಾಡಲು ಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿ ಬರೋಬ್ಬರಿ 12 ಬಾರಿ ಸಭೆಗಳು ನಡೆದಿದ್ದವು. ಸದ್ಯ ಸಭೆಯಲ್ಲಿ ಮಾಡಿಕೊಂಡ ಒಪ್ಪಂದಂತೆ ಭಾರತ ಹಾಗೂ ಚೀನಾ ಗೋಗ್ರಾ ಗಡಿಯಿಂದ ಸಂಪೂರ್ಣ ಹಿಂದೆ ಸರಿದಿವೆ. ಈ ಬಗ್ಗೆ ಇಂಡಿಯನ್ ಆರ್ಮಿ ಸಂಪೂರ್ಣ ವಿವರಗಳನ್ನು ನೀಡಿದೆ.

  • ಜುಲೈ 31 ರಂದು ಭಾರತ ಹಾಗೂ ಚೀನಾದ ಕಮಾಂಡರ್ಸ್​​ ಮಟ್ಟದಲ್ಲಿ ಸಭೆ ನಡೆದಿತ್ತು. ಪೂರ್ವ ಲಡಾಖ್​ನ ಚುಶುಲ್ ಮೊಲ್ಡೋದಲ್ಲಿ ಸಭೆ ನಡೆದಿತ್ತು.
  • ಈ ಮಾತುಕತೆಯಲ್ಲಿ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್​​ನಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನ ಸರಿಪಡಿಸುವ ಎರಡೂ ದೇಶಗಳ ಮಧ್ಯೆ ಚರ್ಚೆ ನಡೆದಿತ್ತು. ಈ ಸಭೆಯ ಪರಿಣಾಮ ಗೋಗ್ರಾ ಗಡಿಯಿಂದ ಹಿಂದೆ ಸರಿಯುವ ಬಗ್ಗೆ ಒಪ್ಪಂದಕ್ಕೆ ಬರಲಾಯಿತು. ಕಳೆದ ವರ್ಷದ ಮೇನಲ್ಲಿ ಮತ್ತೆ ಎರಡೂ ಸೇನೆಗಳು ಮುಖಾಮುಖಿಯಾಗಿದ್ದವು.
  • ಒಪ್ಪಂದದ ಪ್ರಕಾರ ಎರಡೂ ಸೇನೆಗಳು ಅಲ್ಲಿಂದ ಸರಿಯಬೇಕು. ಅದರಂತೆ ಎರಡೂ ಕಡೆ ಸೇನೆ ನಿಯೋಜನೆ ಸ್ಥಗಿತಗೊಂಡಿದೆ. ಹಿಂದೆ ಸರಿಯುವ ಪ್ರಕ್ರಿಯೆಗಳು 2021 ಆಗಸ್ಟ್​ 4 ಮತ್ತು 5 ರಂದು ನಡೆದಿವೆ. ಇದೀಗ ಎರಡೂ ಸೇನೆಗಳು ಗೌರವಯುತವಾಗಿ ಶಾಶ್ವತ ನೆಲೆಗಳಲ್ಲಿವೆ.
  • ಮಾತ್ರವಲ್ಲ ತಾತ್ಕಾಲಿಕವಾಗಿ ಅಲ್ಲಿ ನಿರ್ಮಿಸಿಕೊಂಡಿದ್ದ ಸ್ಟ್ರಕ್ಚರ್ಸ್​ ಮತ್ತು ಇತರೆ ಮೂಲಸೌಕರ್ಯಗಳನ್ನ ಕಿತ್ತುಹಾಕಬೇಕು. ಕಿತ್ತು ಹಾಕಿರೋದನ್ನ ಎರಡೂ ಸೇನೆಗಳು ಖಚಿತಪಡಿಸಿಕೊಳ್ಳಬೇಕು. ಅಲ್ಲದೇ ಈ ಹಿಂದೆ ಯಾವ ರೀತಿ ಇತ್ತೋ ಹಾಗೇ ಅದನ್ನ ಪುನಸ್ಥಾಪಿಸುವುದಾಗಿದೆ.
  • ಎಲ್​ಎಸಿ ಪ್ರದೇಶವನ್ನ ಎರಡೂ ಸೇನೆಗಳು ಗೌರವದಿಂದ ಕಾಣುವುದು ಮತ್ತು ನಿಗಾ ವಹಿಸುವುದು ಮತ್ತು ಯಾವುದೇ ಕಾರಣಕ್ಕೂ ಏಕಪಕ್ಷೀಯವಾಗಿ ಯಾವುದೇ ಬದಲಾವಣೆಗೆ ಯತ್ನಿಸದಿರುವುದು.
    ಈ ಮೂಲಕ ಸೂಕ್ಷ್ಮ ಪ್ರದೇಶದಲ್ಲಿ ಎರಡು ಸೇನೆಗಳ ಮುಖಾಮುಖಿಗೆ ಕಾರಣವಾಗಿದ್ದ ಸಮಸ್ಯೆ ಬಗೆಹರಿದಿದೆ ಅಂತಾ ಸೇನೆ ಹೇಳಿದೆ.
  • ಎರಡೂ ಕಡೆಯವರು ಮಾತುಕತೆಯನ್ನು ಮುಂದುವರಿಸಲು ಮತ್ತು ಪಶ್ಚಿಮ ವಲಯದಲ್ಲಿ ಎಲ್‌ಎಸಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
  • ಈ ಒಪ್ಪಂದವು ಈ ಪ್ರದೇಶದಲ್ಲಿ LAC ಯನ್ನು ಎರಡೂ ಕಡೆಯಿಂದ ಕಟ್ಟುನಿಟ್ಟಾಗಿ ಗಮನಿಸಲಾಗುತ್ತದೆ. ಮತ್ತು ಯಥಾಸ್ಥಿತಿಯಲ್ಲಿ ಏಕಪಕ್ಷೀಯ ಬದಲಾವಣೆ ಇಲ್ಲ ಎಂದು ತಿಳಿಸಿದೆ.
  • ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತೆಯನ್ನು ಕಾಪಾಡಲು ಮತ್ತು ಪಶ್ಚಿಮ ವಲಯದಲ್ಲಿ LAC ಯ ಉದ್ದಕ್ಕೂ ಶಾಂತಿಯನ್ನು ಕಾಪಾಡಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ.

ಇದನ್ನೂ ಓದಿ: BIG BREAKING: ಕೊನೆಗೂ ಮಣಿದ ಚೀನಾ; ಲಡಾಖ್​​ನ ಗೋಗ್ರಾದಿಂದ ಹಿಂದೆ ಸರಿದ ಡ್ರಾಗನ್

Source: newsfirstlive.com Source link