ಎಂಎಸ್​ ಧೋನಿ ಟ್ವಿಟರ್​ ಅಕೌಂಟ್​ನಲ್ಲಿದ್ದ ‘ಬ್ಲ್ಯೂ ಟಿಕ್​’ಗೆ ಏನಾಗಿತ್ತು..?

ಎಂಎಸ್​ ಧೋನಿ ಟ್ವಿಟರ್​ ಅಕೌಂಟ್​ನಲ್ಲಿದ್ದ ‘ಬ್ಲ್ಯೂ ಟಿಕ್​’ಗೆ ಏನಾಗಿತ್ತು..?

ಅದೇನೋ ಗೊತ್ತಿಲ್ಲ… ಟ್ವಿಟರ್​ನಲ್ಲಿ ಒಂದ್​ನಿಷ್ಶ ಇದ್ದಂಗೆ ಜನ ಇನ್ನೊಂದ್​ ಸೆಕೆಂಡ್​ಗೆ ಇರೋದಿಲ್ಲ. ಬರೀ ಅಲ್ಲೋಲ ಕಲ್ಲೋವೇ ಆಗಿರುತ್ತೆ. ಒಂದಲ್ಲ ಒಂದ್​ ವಿಷ್ಯ ಟ್ರೆಂಡಿಂಗ್​ನಲ್ಲಿ ಇದ್ದೇ ಇರುತ್ತೆ. ಇವತ್ತು ಟ್ರೆಂಡಿಂಗ್​ನಲ್ಲಿದ್ದಿದ್ದು ಎಂಎಸ್​ ಧೋನಿ. ಅವ್ರಿಗಿಂತ ಅವರ ಟ್ವಿಟರ್​ ಅಕೌಂಡ್​. ಕಾರಣ ಅಂದ್ರೆ ಅವ್ರ ವೆರಿಫೈಡ್​ ಬ್ಯಾಡ್ಜ್​ ಕಾಣೆಯಾಗಿತ್ತು.

blank

ಎಷ್ಟೋ ಜನ ಸೆಲೆಬ್ರಿಟಿಗಳಿಗೆ, ತಮ್ಮ ಅಫೀಶಿಯಲ್​ ಅಕೌಂಟ್​ ಅಂತ ಪ್ರೂವ್​ ಮಾಡೋದಕ್ಕೆ, ಎಲ್ಲಾ ಸೋಷಿಯಲ್​ ಮೀಡಿಯಾದಲ್ಲಿ, ಒಂದು ವೆರಿಫೈಡ್​ ಬ್ಯಾಡ್ಜ್​(ಟಿಕ್​) ಇರುತ್ತೆ, ಅದೇ ರೀತಿ ಮಹೇಂದ್ರ ಸಿಂಗ್​ ಧೋನಿಯವರ ಪ್ರೊಫೈಲ್​ಗೂ ಇತ್ತು. ಆದ್ರೆ, ಇವತ್ತು ಇದ್ದಕ್ಕಿದ್ದ ಹಾಗೆ, ಆ ಬ್ಯಾಡ್ಜ್​ ಕಾಣೆಯಾಗಿತ್ತು. ಅವ್ರ ಅಭಿಮಾನಿಗಳು, ಅರೇ ಧೋನಿ ಟ್ವಿಟರ್​ನಿಂದ ದೂರ ಹೋಗ್ಬಿಟ್ರಾ? ಅಂತೆಲ್ಲಾ ಪ್ರಶ್ನೆ ಮಾಡೋದಕ್ಕೆ ಶುರು ಮಾಡಿದ್ರು. ಪ್ರಶ್ನೆಗಳು ಎದ್ದಿದ್ದೇ ಎದ್ದಿದ್ದು ನೋಡಿ, ಟ್ವಿಟರ್​ ವಾಪಸ್​ ಅವ್ರ ಹೆಸರಿನ ಪಕ್ಕ ಈಗ ಮತ್ತೆ ಬ್ಲ್ಯೂ ಟಿಕ್​ ಕೊಟ್ಟಿದೆ.

 

Source: newsfirstlive.com Source link