ಕಿಚ್ಚ ಸುದೀಪ್ ರೈಟ್ ನನ್ನ ಮಗಳು, ಲೆಫ್ಟ್​ನಲ್ಲಿ ಮಂಜು Or ಅರವಿಂದ್​ ಇರ್ತಾರೆ-ದಿವ್ಯಾ ತಾಯಿ

ಕಿಚ್ಚ ಸುದೀಪ್ ರೈಟ್ ನನ್ನ ಮಗಳು, ಲೆಫ್ಟ್​ನಲ್ಲಿ ಮಂಜು Or ಅರವಿಂದ್​ ಇರ್ತಾರೆ-ದಿವ್ಯಾ ತಾಯಿ

ಬಿಗ್​ಬಾಸ್​ ಟ್ರೋಪಿಯನ್ನ ನನ್ನ ಮಗಳು ಗೆದ್ದರೆ ನನಗೆ ತುಂಬಾ ಸಂತೋಷ ಆಗುತ್ತೆ. ಬಹುಶಃ ಅಂತಿಮ ಹಣಾಹಣಿಯಲ್ಲಿ ಮಗಳು ದಿವ್ಯಾ ಉರುಡುಗ ಜೊತೆ ಕೆಪಿ ಅರವಿಂದ ಅಥವಾ ಲ್ಯಾಗ್ ಮಂಜು ಇರುತ್ತಾರೆ ಅಂತಾ ದಿವ್ಯಾ ಉರುಡುಗ ಅವರ ತಾಯಿ ಕುಸುಮಾ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್​ಫಸ್ಟ್ ಜೊತೆ ಮಾತನಾಡಿದ ಕುಸುಮಾ, ನನ್ನ ಮಗಳು ದಿವ್ಯಾ ಉರುಡುಗೆ ಶ್ರದ್ಧೆ, ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆ ಇದೆ. ಹೀಗಾಗಿ ಕೊನೆಯವರೆಗೂ ಉಳಿದುಕೊಂಡಿದ್ದಾರೆ. ಇದು ನನಗೆ ಮೊದಲಿನಿಂದಲೂ ನಂಬಿಕೆ ಇತ್ತು.

ಇಂದು ಅವಳಿಗೆ ಹೆಚ್ಚು ಫ್ಯಾನ್ಸ್​ ಫಾಲೋವರ್ಸ್​ ಇದ್ದಾರೆ ಅಂದ್ರೆ ಅದು ಅವಳ ನಡವಳಿಕೆ. ಬಿಗ್​ಬಾಸ್​ ಮನೆಯಲ್ಲಿ ಅವಳು ಯಾವುದೇ ತಪ್ಪು ಮಾಡಿಲ್ಲ. ಎಲ್ಲವನ್ನೂ ಸಹ ತುಂಬಾ ತಿಳುವಳಿಕೆಯಿಂದ ಮಾಡುತ್ತಿದ್ದಾಳೆ. ಇದೇ ವೇಳೆ ದಿವ್ಯಾ ಯು ಹಾಗೂ ಅರವಿಂದ್ ಕೆಪಿ ಜೊತೆಗಿನ ಸ್ನೇಹದ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.

Source: newsfirstlive.com Source link