‘ಮುಸ್ಲಿಂ ನಾಯಕ ವೀಕ್ ಆಗ್ಲಿ ಅಂತ ರೇಡ್’ ED ದಾಳಿ ಬಗ್ಗೆ ಸಿದ್ದರಾಮಯ್ಯ ಆಪ್ತನ ಆಕ್ರೋಶ

‘ಮುಸ್ಲಿಂ ನಾಯಕ ವೀಕ್ ಆಗ್ಲಿ ಅಂತ ರೇಡ್’ ED ದಾಳಿ ಬಗ್ಗೆ ಸಿದ್ದರಾಮಯ್ಯ ಆಪ್ತನ ಆಕ್ರೋಶ

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ರೇಡ್​​ಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ನಿವಾಸದ ಬಳಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿರುವ ಮಾಜಿ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಆಗಮಿಸಿದ್ದಾರೆ.

ಇದನ್ನೂ ಓದಿ: ಜಮೀರ್​ ಮನೆಯಲ್ಲಿ ಏನೇನೆಲ್ಲಾ ಸೀಜ್​ ಮಾಡಿದ್ದಾರೆ? ಯಾರೀ ಮಂಗಳೂರು ಮೂಲದ ವ್ಯಕ್ತಿ?

ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅಶೋಕ್ ಪಟ್ಟಣ್.. ಐಎಂಎ ಪ್ರಕರಣ ನಡೆದು ತುಂಬಾ ದಿನ ಆಯ್ತು.. ಈ ದಾಳಿ ರಾಜಕೀಯ ಪ್ರೇರಿತ ಅಂತ ಗೊತ್ತಾಗುತ್ತಿದೆ.. ತಪ್ಪಿದ್ರೆ ಆವತ್ತೇ ಅರೆಸ್ಟ್ ಮಾಡ್ತಾ ಇದ್ರು.. ಇದು ರಾಜಕೀಯ ಪ್ರೇರಿತ ಎಂದಿದ್ದಾರೆ.

blank
ಅಶೋಕ್ ಪಟ್ಟಣ್, ಮಾಜಿ ಶಾಸಕ

ಅಲ್ಲದೇ ದಿಲ್ಲಿಯಿಂದ ಬಂದು ರೈಡ್ ಮಾಡಿದ್ದಾರೆ.. ಮುಸ್ಲಿಂ ನಾಯಕ ವೀಕ್ ಆಗ್ತಾರೆ ಅಂತ ರೈಡ್ ನಡೆದಿದೆ. ಸ್ನೇಹಿತನಾದ ಕಾರಣ ಇಂತ ಸಮಯದಲ್ಲಿ ಭೇಟಿ ಮಾಡೋದು ಒಳಿತು ಎಂದು ಬಂದೆ.. ಜಮೀರ್ ವಿಶ್ರಾಂತಿ ಪಡೆಯುತ್ತಿದ್ದಾರೆ.. ಎಂದು ಜಮೀರ್ ಅವರನ್ನ ಭೇಟಿಯಾಗದೇ ಅಶೋಕ್ ಪಟ್ಟಣ್ ವಾಪಸ್ಸಾಗಿದ್ದಾರೆ.

ಇದನ್ನೂ ಓದಿ: ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದಲ್ಲ -ED ದಾಳಿಗೆ ಜಮೀರ್​ ಕಿಡಿ

Source: newsfirstlive.com Source link