ಟಾಲಿವುಡ್​​ ಅಂಗಳದಲ್ಲಿ ಕೋಟಿಗೊಬ್ಬ 3.. ತೆಲುಗಿನಲ್ಲಿ ಪಟಾಕಿ ಪೋರಿ ಜೊತೆ ಕಿಚ್ಚನ ಎಂಟ್ರಿ

ಟಾಲಿವುಡ್​​ ಅಂಗಳದಲ್ಲಿ ಕೋಟಿಗೊಬ್ಬ 3.. ತೆಲುಗಿನಲ್ಲಿ ಪಟಾಕಿ ಪೋರಿ ಜೊತೆ ಕಿಚ್ಚನ ಎಂಟ್ರಿ

ಕರುನಾಡ ಕಲಾದೀಪ, ಕಿಚ್ಚ ಸುದೀಪ ನಾಡು ನುಡಿಗಳ ಗಡಿರೇಖೆ ಮೀರಿ ಬೆಳೆದಿರೋ ಸ್ಟಾರ್ ನಟ.. ಆಗಾಗ ಅನ್ಯ ಭಾಷೆಗಳಲ್ಲಿ ಪ್ರೇಕ್ಷಕರನ್ನ ರಂಜಿಸೋ ಅಭಿನಯ ಚಕ್ರವರ್ತಿ ಅತಿ ಶೀಘ್ರದಲ್ಲೇ ಪಕ್ಕದ ಟಾಲಿವುಡ್​​​ನಲ್ಲಿ ಪಟಾಕಿ ಹಚ್ಚಿ ಹಬ್ಬ ಮಾಡಲಿದ್ದಾರೆ.ಆದ್ರೆ ಯಾವ ಸಿನಿಮಾದ ಮೂಲಕ ತೆಲುಗು ಭಾಷೆಯಲ್ಲಿ ದೀಪಾವಳಿ ಹಬ್ಬ ಮಾಡಲಿದ್ದಾರೆ ಕಿಚ್ಚ ಅನ್ನೋದ್​ ಗೊತ್ತಾ?

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ..ಹಿಂದೆ ಕೋಟಿಗೊಬ್ಬ 2 ಸಿನಿಮಾ ತಮಿಳಿನಲ್ಲಿ ರಿಲೀಸ್ ಆಗಿತ್ತು ; ಈಗ ಕೋಟಿಗೊಬ್ಬ-3 ಸಿನಿಮಾ ತೆಲುಗು ಭಾಷೆಯಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈಗಾಗಲೇ ಕನ್ನಡಿಗರಿಗೆ ಟೈಟಲ್ ಪೋಸ್ಟರ್ , ಟೀಸರ್ , ಮೇಕಿಂಗ್ ಹಾಗೂ ಸಾಂಗ್ಸ್​​ಗಳಿಂದ ಭರವಸೆ ಮೂಡಿಸಿರೋ ಮೂರನೇ ಕೋಟಿಗೊಬ್ಬ ಸಿನಿಮಾ ತಂಡ ಕೋಟಿಕೊಕ್ಕುಡು ಹೆಸರಿನಲ್ಲಿ ತೆಲುಗು ಪ್ರೇಕ್ಷಕರನ್ನ ಸೆಳೆಯಲು ಮುಂದಾಗಿದೆ. ಪಟಾಕಿ ಪೋರಿಯೋ ಹಾಡನ್ನ ಹೊರ ಬಿಟ್ಟು ಕನ್ನಡ ಸಿನಿ ರಸಿಕರ ಮನಸಿನಲ್ಲಿ ಕುತೂಹಲದ ಪಟಾಕಿ ಹಚ್ಚಿದ್ದ ಕೋಟಿಗೊಬ್ಬ ಟೀಮ್​​​ ಈಗ ತೆಲುಗಿನಲ್ಲಿಯೂ ಪಟಾಕಿ ಪೋರಿ ಹಾಡನ್ನ ರಿಲೀಸ್ ಮಾಡುತ್ತಿದೆ.ಈ ತಿಂಗಳ 9ನೇ ತಾರೀಖ್ ಪಟಾಕಿ ಪೋರಿಯೋ ಹಾಡು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

ಶಿವಕಾರ್ತಿಕ್ ನಿರ್ದೇಶನದ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಇಷ್ಟೊತ್ತಿಗಾಗಲೇ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಿ ಬಿಡಬೇಕಿತ್ತು. ಆದ್ರೆ ಲಾಕ್ ಡೌನ್ , ಕೊರೊನಾ ಅದು, ಇದು ಅಂತೆಲ್ಲ ಆಗಿ ಕೋಟಿಗೊಬ್ಬ 3 ಸಿನಿಮಾ ಎರಡು ವರ್ಷಗಳಿಂದ ವೈಟಿಂಗ್​ ಲಿಸ್ಟ್​​​ನಲ್ಲೇ ಇದೆ. ಆದ್ರೆ ಈಗ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ.

Source: newsfirstlive.com Source link