ದೇಶದ ಮರ್ಯಾದೆಯನ್ನ ವಿಶ್ವ ಮಟ್ಟದಲ್ಲಿ ಕಳೆದಿದ್ದೀರಿ; ಪಾಕ್ ಸರ್ಕಾರಕ್ಕೆ ಕೋರ್ಟ್ ಛೀಮಾರಿ

ದೇಶದ ಮರ್ಯಾದೆಯನ್ನ ವಿಶ್ವ ಮಟ್ಟದಲ್ಲಿ ಕಳೆದಿದ್ದೀರಿ; ಪಾಕ್ ಸರ್ಕಾರಕ್ಕೆ ಕೋರ್ಟ್ ಛೀಮಾರಿ

ಲಾಹೋರ್: ಇತ್ತೀಚೆಗೆ ಪಂಜಾಬ್ ಪ್ರಾಂತ್ಯದಲ್ಲಿನ ಗಣೇಶ ದೇವಸ್ಥಾನದ ಮೇಲೆ ಪಾಕಿಸ್ತಾನದ ಕೆಲವು ಕಿಡಿಗೇಡಿಗಳು ದಾಳಿ ನಡೆಸಿದ್ದರು. ಈ ವಿಚಾರವಾಗಿ ಪಾಕ್​ನ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಮೇಲೆ ಕಿಡಿಕಾರಿದ್ದು ಜಾಗತಿಕ ಮಟ್ಟದಲ್ಲಿ ದೇಶದ ಮರ್ಯಾದೆ ತೆಗೆದಿದ್ದೀರಿ ಎಂದು ಹೇಳಿದೆ.

ಇದನ್ನೂ ಓದಿ: ಎಮ್ಮೆ, ಕೋಣೆ ಆಯ್ತು.. ಈಗ ಪ್ರಧಾನಿ ನಿವಾಸವೇ ಬಾಡಿಗೆಗೆ ಬಿಟ್ಟ ಪಾಕ್

ಅಲ್ಲದೇ ದೇವಸ್ಥಾನದ ಮೇಲಿನ ದಾಳಿಯನ್ನು ಸರ್ಕಾರಿ ಸಂಸ್ಥೆಗಳು ತಡೆಯುವಲ್ಲಿ ಸೋತಿವೆ.. ಆರೋಪಿಗಳನ್ನ ಕೂಡಲೇ ಬಂಧಿಸಿ ಎಂದು ಹೇಳಿದೆ. ಪೊಲೀಸರು ಘಟನೆ ವೇಳೆ ನಿಂತು ನೋಡಿದ್ದನ್ನ ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ.. ಘಟನೆಗೆ ಸಂಬಂಧಿಸಿದಂತೆ ಕಮಿಷನರ್, ಡೆಪ್ಯೂಟಿ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅವರನ್ನ ಹುದ್ದೆಯಿಂದ ತೆಗೆದುಹಾಕಿ ಎಂದು ಖಡಕ್ಕಾಗಿ ಹೇಳಿದೆ.

ಇದನ್ನೂ ಓದಿ: ಪಾಕ್​ನಲ್ಲಿ ಗಗನಕ್ಕೇರಿದ ತೈಲ ಬೆಲೆ; ಪ್ರತಿ ಲೀಟರ್​ ಪೆಟ್ರೋಲ್​ಗೆ 118 ರೂ. ಬೆಲೆ

ಮೂರು ದಿನಗಳ ಕಳೆದರೂ ಒಂದೇ ಒಂದು ಅರೆಸ್ಟ್ ಕೂಡ ಆಗಿಲ್ಲ.. ಇದು ಪೊಲೀಸರ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಇದೇ ವೇಳೆ ಕೋರ್ಟ್ ಪಾಕ್ ಸರ್ಕಾರ ಹಾಗೂ ಪೊಲೀಸರಿಗೆ ಛೀಮಾರಿ ಹಾಕಿದೆ.

Source: newsfirstlive.com Source link