‘ಹಾಲು ಮಾರುವವರೇ ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ತಾರೆ.. ನೀವ್ಯಾಕೆ ಹೀಗೆ..?’- ನಟ ಧನುಷ್​​ಗೆ ಕೋರ್ಟ್ ತರಾಟೆ

‘ಹಾಲು ಮಾರುವವರೇ ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ತಾರೆ.. ನೀವ್ಯಾಕೆ ಹೀಗೆ..?’- ನಟ ಧನುಷ್​​ಗೆ ಕೋರ್ಟ್ ತರಾಟೆ

ಚೆನ್ನೈ: ರೋಲ್ಸ್ ರಾಯ್ಸ್ ಕಾರ್​ ಒಂದನ್ನು ವಿದೇಶದಿಂದ ತರಿಸಿಕೊಂಡ ವೇಳೆ ಎಂಟ್ರಿ ಟ್ಯಾಕ್ಸ್ ಕಟ್ಟದ ಆರೋಪ ತಮಿಳು ನಟ ಧನುಷ್​ ವಿರುದ್ಧ ಕೇಳಿಬಂದಿದ್ದು ಮದ್ರಾಸ್ ಹೈಕೋರ್ಟ್ ಧನುಷ್ ವಿರುದ್ಧ ಕಿಡಿಕಾರಿದೆ. ಸಾಮಾನ್ಯ ಜನರೇ ಪ್ರಾಮಾಣಿಕವಾಗಿ ತೆರಿಗೆಗಳನ್ನು ಕಟ್ಟುತ್ತಿರುವಾಗ ಸೆಲಿಬ್ರಿಟಿಗಳೇ ಟ್ಯಾಕ್ಸ್ ಕಟ್ಟದಿರುವುದು ಏಕೆ ಎಂದು ಕೇಳಿದೆ. ಅಲ್ಲದೇ 48 ಗಂಟೆಗಳಲ್ಲಿ 30.30 ಲಕ್ಷ ತೆರಿಗೆ ಹಣ ಕಟ್ಟುವಂತೆ ನಿರ್ದೇಶಿಸಿದೆ.

ಇದನ್ನೂ ಓದಿ: ರೋಲ್ಸ್​ ರಾಯ್​​ ಎಂಟ್ರಿ ಟ್ಯಾಕ್ಸ್​​​​ ಕಟ್ಟದೇ ಕೋರ್ಟ್ ​​ಮೆಟ್ಟಿಲೇರಿದ್ದ ವಿಜಯ್; ಛೀಮಾರಿ ಹಾಕಿದ ಹೈ ಕೋರ್ಟ್

ನೀವು ಟ್ಯಾಕ್ಸ್ ಕಟ್ಟಿದವರ ಹಣದಿಂದ ನಿರ್ಮಿಸಲಾದ ರಸ್ತೆಯಲ್ಲಿ ಐಶಾರಾಮಿ ಕಾರ್​ಗಳನ್ನ ಓಡಿಸ್ತೀರ.. ಹಾಲು ವ್ಯಾಪಾರಿಗಳು ದಿನಗೂಲಿ ಕಾರ್ಮಿಕರೂ ಸಹ ಅವರು ತಾವು ಖರೀದಿಸುವ ಒಂದೊಂದು ಲೀಟರ್ ಪೆಟ್ರೋಲ್​ಗೂ ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಅವರ್ಯಾರೂ ಸಹ ಕೋರ್ಟ್ ಬಾಗಿಲು ಬಡಿದು ಟ್ಯಾಕ್ಸ್ ಕಟ್ಟುವುದರಿಂದ ದೂರ ಉಳಿಯಲು ಪ್ರಯತ್ನಿಸುತ್ತಿಲ್ಲ ಎಂದು ಜಡ್ಜ್ ಎಸ್​.ಎಂ ಸುಬ್ರಮಣಿಯನ್ ಹೇಳಿಕೆ ನೀಡಿದ್ದಾರೆ.

ಧನುಷ್ಯ 2015 ರಲ್ಲಿ ರೋಲ್ಸ್ ರಾಯ್ಸ್ ಘೋಷ್ಟ್ ಕಾರ್​ನ್ನು ಇಂಗ್ಲೆಂಡ್​ನಿಂದ 2.15 ಕೋಟಿಗೆ ಖರೀದಿಸಿ ತರಿಸಿಕೊಂಡಿದ್ದರು. ಈ ವೇಳೆ ಎಂಟ್ರಿ ಟ್ಯಾಕ್ಸ್ ಕಟ್ಟಿರಲಿಲ್ಲ.. ಬದಲಿಗೆ ಟ್ಯಾಕ್ಸ್ ಕಟ್ಟದಿರಲು ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದೆ. ಇನ್ನು ಧನುಷ್ ಈವರೆಗೆ 60.60 ಲಕ್ಷದಲ್ಲಿ 30.30 ಲಕ್ಷ ಟ್ಯಾಕ್ಸ್ ಕಟ್ಟಿದ್ದು ಉಳಿದರ್ಧ ಹಣವನ್ನು 48 ಗಂಟೆಗಳಲ್ಲಿ ಕಟ್ಟುವಂತೆ ಕೋರ್ಟ್ ನಿರ್ದೇಶಿಸಿದೆ.

Source: newsfirstlive.com Source link