ಮಂತ್ರಿ ಸ್ಥಾನಕ್ಕಾಗಿ, ಖಾತೆಗಾಗಿ ಲಾಬಿ ಮಾಡಿಲ್ಲ: ಪ್ರಭು ಚವ್ಹಾಣ್

ಬೀದರ್: ಮಂತ್ರಿ ಸ್ಥಾನಕ್ಕಾಗಿ ಹಾಗೂ ಖಾತೆಗಾಗಿ ಯಾವುದೇ ಲಾಬಿ ಮಾಡಿಲ್ಲ ಎಂದು ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಪ್ರಭು ಚವ್ಹಾಣ್ ಸ್ಪಷ್ಟ ಪಡಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಎರಡು ವರ್ಷದಲ್ಲಿ ಪಶು ಸಂಗೋಪನೆ ಇಲಾಖೆಯಲ್ಲಿ ಬಹಳ ಕೆಲಸಗಳನ್ನು ಮಾಡಿದ್ದು, ಇನ್ನೂ ತುಂಬಾ ಕೆಲಸಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ಈ ಖಾತೆ ಮತ್ತೆ ಸಿಕ್ಕರೆ ಪೂರ್ಣ ಕೆಲಸ ಮಾಡುತ್ತೆನೆ ಎಂದರು.

ಕೊರೊನಾ ಮೂರನೇ ಅಲೆ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ನಾಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 11 ಗಂಟೆಗೆ ಸಭೆ ಕರೆಯಲಾಗಿದೆ. ಮೂರನೇ ಅಲೆ ತಡೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಎಲ್ಲವನ್ನೂ ನಾನು ಮಾಡುತ್ತೇನೆ. ಜೊತೆಗೆ ಬೀದರ್ ಅಭಿವೃದ್ಧಿಗೆ ಏನು ಮಾಡಬೇಕೆಂದು ಪ್ಲಾನ್ ಮಾಡಿ ಅಭಿವೃದ್ಧಿಪಡಿಸುತ್ತೆನೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

Source: publictv.in Source link